ಕೆಎಂಸಿ ಆಸ್ಪತ್ರೆ ಅತ್ತಾವರ ಲಾಯಲ್ಟಿ ಕಾರ್ಡ್ : ಮಡಿಕೇರಿಯಲ್ಲಿ ನೋಂದಾವಣಿ ಆರಂಭ

07/11/2020

ಮಡಿಕೇರಿ ನ. 7 : ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಇದರ ಅಂಗ ಸಂಸ್ಥೆಯಾಗಿರುವ ಕೆ.ಎಂ.ಸಿ ಆಸ್ಪತ್ರೆ ಅತ್ತಾವರವು ಕರಾವಳಿ ಮತ್ತು ಆಸುಪಾಸಿನ ಪ್ರದೇಶದ ಜನರ ಸ್ವಾಸ್ಥ್ಯಕ್ಕಾಗಿ “ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ ಲಾಯಲ್ಟಿ ಕಾರ್ಡ್” ಎಂಬ ಆರೋಗ್ಯ ಪರ ಯೋಜನೆಯನ್ನು ಹಮ್ಮಿಕೊಂಡಿದೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆಎಂಸಿ ಆಸ್ಪತ್ರೆ ಅತ್ತಾವರದ ಸಾರ್ವಜನಿಕ ಸಂಪರ್ಕ ವಿಭಾಗದ ಮುಖ್ಯಸ್ಥ ರಾಕೇಶ್, ಕಡಿಮೆ ವಾರ್ಷಿಕ ವರಮಾನವಿರುವ ಕುಟುಂಬಗಳಿಗೆ ಈ ಯೋಜನೆಯು ವರದಾನವಾಗಿ ಪರಿಣಮಿಸಲಿದ್ದು, ಸಾರ್ವಜನಿಕರು ಜಾತಿ, ಮತ, ಭೇದವಿಲ್ಲದೆ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಈ ಯೋಜನೆಯು ಮಂಗಳೂರಿನ ಅತ್ತಾವರದಲ್ಲಿರುವ ಕೆಎಂಸಿ ಆಸ್ಪತ್ರೆಗೆ ಸೀಮಿತವಾಗಿದ್ದು, ಈ ಯೋಜನೆಯಡಿಯಲ್ಲಿ ನೋಂದಾಯಿಸಲ್ಪಟ್ಟ ಯಾವುದೇ ಸದಸ್ಯರು ಆಸ್ಪತ್ರೆಯ ಜನರಲ್ ವಾರ್ಡಿನಲ್ಲಿ ಒಳರೋಗಿಯಾಗಿ ದಾಖಲಾದಲ್ಲಿ ಸದಸ್ಯರ ಬಿಲ್ಲಿನ ಮೇಲೆ ಶೇ.90 ರಷ್ಟು ರಿಯಾಯಿತಿಗೆ ಅರ್ಹರಾಗಿರುತ್ತಾರೆ. ಈ ರಿಯಾಯಿತಿಯ ಮೊತ್ತವು ಒಂದು ಕುಟುಂಬಕ್ಕೆ ಒಂದು ವರ್ಷಕ್ಕೆ ರೂ.35,000 ಮಾತ್ರ ಆಗಿರುತ್ತದೆ. ಈ ಯೋಜನೆಯಡಿ ಎಲ್ಲಾ ರೋಗಗÀಳಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಅದೇ ರೀತಿ ಈ ಯೋಜನೆಯಡಿಯಲ್ಲಿ ಸದಸ್ಯರು ಹೊರರೋಗಿ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಬಹುದಾಗಿದ್ದು, ತಜ್ಞ ವೈದ್ಯರ ಸಮಾಲೋಚನೆಗೆ ಶೇ. 50ರಷ್ಟು ರಿಯಾಯಿತಿ, ಪ್ರಯೋಗಾಲಯ ಪರೀಕ್ಷೆಗಳಿಗೆ (ಐಚಿb Iಟಿvesಣigಚಿಣioಟಿs) ಶೇ. 20ರಷ್ಟು ರಿಯಾಯಿತಿ ನೀಡಲಾಗುವುದು.
ಸಿ.ಟಿ ಸ್ಕ್ಯಾನ್, ಎಂ.ಆರ್.ಐ., ಎಕ್ಸ್‍ರೇ, ಸ್ಕ್ಯಾನಿಂಗ್ ಮತ್ತು ವೈದ್ಯರ ಶುಲ್ಕದ ಮೇಲೆ ಶೇ.20ರಷ್ಟು ರಿಯಾಯಿತಿ, ಹೊರರೋಗಿ ವಿಭಾಗದಲ್ಲಿ ನಡೆಸುವ ಚಿಕಿತ್ಸಾ ವಿಧಾನಗಳ (ವೃತ್ತಿ ಶುಲ್ಕ ಸೇರಿದಂತೆ) ಮೇಲೆ ಶೇ. 10 ರಷ್ಟು ರಿಯಾಯಿತಿ ಹಾಗೂ ಆಸ್ಪತ್ರೆಯ ಔಷಧಾಲಯದಿಂದ ಖರೀದಿಸಿದ ಔಷಧಿಗಳ ಮೇಲೆ ಶೇ.10ರಷ್ಟು ರಿಯಾಯಿತಿ ದೊರೆಯುತ್ತದೆ ಎಂದು ತಿಳಿಸಿದರು.
ಈ ಯೋಜನೆಯ ಸದಸ್ಯರಾಗಲು ವಯಸ್ಸಿನ ಮಿತಿ ಇರುವುದಿಲ್ಲ. 91 ದಿವಸದ ಮಗುವಿನಿಂದ ಹಿಡಿದು 90 ವರ್ಷ ವಯಸ್ಸಿನ ಹಿರಿಯ ನಾಗರಿಕರೂ ಕೂಡ ಈ ಯೋಜನೆಗೆ ಸೇರಲು ಅವಕಾಶವಿದ್ದು, ಹಿರಿಯ ನಾಗರೀಕರಿಗೆ ಇದು ವರದಾನವಾಗಲಿದೆ. ಸಾಮಾನ್ಯವಾಗಿ 65 ವರ್ಷ ಮೇಲ್ಪಟ್ಟ ಹಿರಿಯರಿಗೆ ಯಾವುದೇ ಆರೋಗ್ಯ ವಿಮಾ ಸಂಸ್ಥೆಯು ಆರೋಗ್ಯ ವಿಮೆಯನ್ನು ನೀಡಲು ಬಯಸುವುದಿಲ್ಲ. ಆದರೆ ಈ ಯೋಜನೆಯ ಮೂಲಕ ಹಿರಿಯ ನಾಗರಿಕರು ಕೂಡ ಉನ್ನತ ಮಟ್ಟದ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ಬಾಣಂತನದ ಸೌಲಭ್ಯಗಳು ಕೂಡ ಲಭ್ಯವಿದ್ದು, ಮೊದಲೆರಡು ಮಕ್ಕಳಿಗೆ ಮಾತ್ರ ಇದು ಸೀಮಿತವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಯಡಿ ಸದಸ್ಯರಾಗಲು ಅತೀ ಕಡಿಮೆ ನೋಂದಾವಣಿ ಶುಲ್ಕವನ್ನು ಭರಿಸಬೇಕಾಗುತ್ತದೆ. ಕುಟುಂಬವೊಂದರಲ್ಲಿ ಗರಿಷ್ಟ 5 ಮಂದಿ ಸದಸ್ಯರು ರೂ.300 ಪಾವತಿಸಿ ಈ ಯೋಜನೆಯ ಸದಸ್ಯರಾಗಬಹುದು. ಒಂದು ವೇಳೆ ಕುಟುಂಬದಲ್ಲಿ 5 ಕ್ಕಿಂತ ಹೆಚ್ಚು ಸದಸ್ಯರಿದ್ದಲ್ಲಿ ಪ್ರತೀ ಹೆಚ್ಚುವರಿ ಸದಸ್ಯನಿಗೆ ರೂ.100 ರಂತೆ ನೀಡಿ ನೋಂದಾಯಿಸಿ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ನೋಂದಾಯಿಸಿದ ಕುಟುಂಬಕ್ಕೆ ಪೂರ್ವ ಸಂಖ್ಯಾ ಮುದ್ರಿತ ಸ್ಮಾರ್ಟ್‍ಕಾರ್ಡನ್ನು ಸ್ಥಳದಲ್ಲಿಯೇ ನೀಡಲಾಗುವುದು ಮತ್ತು ಈ ಯೋಜನೆಯ ಮಾನ್ಯತೆಯು ಕಾರ್ಡಿನಲ್ಲಿ ನಮೂದಿಸಿದ ಪ್ರಾರಂಭದ ದಿನಾಂಕದಿಂದ ಒಂದು ವರ್ಷದವರೆಗೆ ಇರುತ್ತದೆ. ನೋಂದಾವಣೆಯ ಸಮಯದಲ್ಲಿ ಕುಟುಂಬ ಸದಸ್ಯರ ದಾಖಲೆ ಪ್ರತಿಗಳನ್ನು ನೀಡಬೇಕಾಗಿದ್ದು ರೇಶನ್ ಕಾರ್ಡ್ ಅಥವಾ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಪ್ರತಿಗಳನ್ನು ನೀಡಿ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ರಾಕೇಶ್ ತಿಳಿಸಿದರು.
ಆಸಕ್ತ ಸದಸ್ಯರು ಅರ್ಜಿಗಳಿಗಾಗಿ ನ್ಯೂಸ್ ಡೆಸ್ಕ್ ಕಚೇರಿ, ಪತ್ರಿಕಾ ಭವನ ಸಂಕೀರ್ಣ, ಮಡಿಕೇರಿ, ಮೊ.ಸಂ 76766 24467, ಶ್ರೀಗಣೇಶ್ ಮೆಡಿಕಲ್ಸ್, ವಿರಾಜಪೇಟೆ, 63600 69995, ಶ್ರೀಅಮ್ಮ ಮೆಡಿಕಲ್ಸ್, ಮೂರ್ನಾಡು, 96118 79779, ವೆನ್ಲಾಕ್ ಮೆಡಿಕಲ್ಸ್, ಜಿಲ್ಲಾಸ್ಪತ್ರೆ ಎದುರು, ಮಡಿಕೇರಿ, 96201 48374, ಫೋಟೋ ಎಕ್ಸ್‍ಪ್ರೆಸ್, ಡಿಜಿಟಲ್ ಲ್ಯಾಬ್, ಚರ್ಚ್ ಕಾಂಪ್ಲೆಕ್ಸ್ ಮತ್ತು ಕಾವೇರಿ ಮೆಡಿಕಲ್ಸ್, ಮೂರ್ನಾಡು ಇವರನ್ನು ಸಂಪರ್ಕಿಸಬಹುದಾಗಿದೆ.
ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್‍ನ ಕೊಡಗು ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಪಿ.ಎ.ಯೂಸುಫ್, ವಿಕಾಸ್ ಜನಸೇವಾ ಟ್ರಸ್ಟ್ ಆಶ್ರಮದ ಅಧ್ಯಕ್ಷ ಹಾಗೂ ಜೆಸಿಐ ಅಧ್ಯಕ್ಷ ಹೆಚ್.ರಮೇಶ್, ಲಯನ್ಸ್ ಕ್ಲಬ್ ಟ್ರಸ್ಟ್‍ನ ಅಧ್ಯಕ್ಷÀ ನವೀನ್ ಅಂಬೇಕಲ್, ಉಪಾಧ್ಯಕ್ಷ ಎಂ.ಎ.ನಿರಂಜನ್, ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದ ಸಾರ್ವಜನಿಕ ಸಂಪರ್ಕ ವಿಭಾಗದ ಡಿ.ಬಿ.ಮನಮೋಹನ ಉಪಸ್ಥಿತರಿದ್ದರು.