ಸೀರತ್ ಅಭಿಯಾನದ ಪ್ರಯುಕ್ತ ಪ್ರಬಂಧ ಸ್ಪರ್ಧೆಯ ಪೋಸ್ಟರ್ ಬಿಡುಗಡೆ

07/11/2020

ಮಡಿಕೇರಿ ನ. 7 : ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ” ಎಂಬ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ವಲಯ ಮಟ್ಟದಲ್ಲಿ ಶಿಕ್ಷಕರಿಗೆ ಹಾಗೂ D.ED/B.ED, M.ED ವಿದ್ಯಾರ್ಥಿಗಳಿಗೆ ” ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದ್ (ಸ) ಅವರ ಕೊಡುಗೆ” ಎಂಬ ವಿಷಯದ ಪ್ರಬಂಧ ಸ್ಪರ್ಧೆಯ ಪೆÇೀಸ್ಟರ್ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್.ಎಸ್ ಚೇತನ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಜಮಾಅತೆ ಇಸ್ಲಾಮೀ ಹಿಂದ್ ವಲಯ ಸಂಚಾಲಕ ಯು ಅಬ್ದುಲ್ ಸಲಾಮ್, ಸ್ಥಾನೀಯ ಅಧ್ಯಕ್ಷ ಜಿ.ಹೆಚ್ ಮುಹಮ್ಮದ್ ಹನೀಫ್, ಅಭಿಯಾನದ ಸಂಚಾಲಕ ಎಂ.ಅಬ್ದುಲ್ಲಾ, ಜಿಲ್ಲಾ ಸಾರ್ವಜನಿಕ ಸಂಪರ್ಕ ವಿಭಾಗದ ಸಂಚಾಲಕ ಸಿ.ಹೆಚ್ ಅಪ್ಸರ್ ಮತ್ತು ನಾಸಿರ್ ಉಪಸ್ಥಿತರಿದ್ದರು.