Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
4:03 AM Friday 22-October 2021

ಎಸ್ ವಿಂಗ್ ಎಮ್ಮೆಮ್ಮಾಡು ತಂಡ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ಫಲಿತಾಂಶ ಪ್ರಕಟ

08/11/2020

ಮಡಿಕೇರಿ ನ.8 : ಪ್ರವಾದಿ ಪೈಗಂಬರ್(ಸ.ಅ) ಅವರ ಜನ್ಮ ದಿನದ ಪ್ರಯುಕ್ತ ಎಸ್ ವಿಂಗ್ ಎಮ್ಮೆಮ್ಮಾಡು ತಂಡ ಆಯೋಜಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಪ್ರಥಮ ಸ್ಥಾನವನ್ನು ಮುಂಬಯಿಯ ಡಾ.ಕೊಳ್ಚಪೆ ಗೋವಿಂದ್ ಭಟ್ ದ್ವಿತೀಯ ಸ್ಥಾನ ಬಳ್ಳಾರಿಯ ನಿಷ್ಟಿ ರುದ್ರಪ್ಪ ಹಾಗೂ ತೃತೀಯ ಸ್ಥಾನವನ್ನು ಮಂಗಳೂರಿನ ಝುಲೇಖ ಮಮ್ತಾಜ್ ಪಡೆದಿದ್ದಾರೆ.
ಸಹನಾ ಕಾಂತಬೈಲ್, ಸುನಿಲ್ ಗರಗ ದಾರವಾಡ, ದುರ್ಗಾಪ್ರಸಾದ್ ಮಡಿಕೇರಿ, ತಸ್ಮಿಯಾ ಶಿವಮೊಗ್ಗ, ಮುಹಮ್ಮದ್ ರಾಫಿ ಅಯ್ಯಂಗೇರಿ, ಗುಣವತಿ ದಾನಗುಡ್ಡೆ ಬೆಳ್ತಂಗಡಿ, ಸಂದೇಶ್ ಜೋಸೆಫ್ ಸುಂಟಿಕೊಪ್ಪ, ಕೌಸಲ್ಯ ಚೆನ್ನರಾಯಪಟ್ಟಣ, ನವ್ಯಶ್ರೀ ಚೆನ್ನರಾಯಪಟ್ಟಣ, ಉನೈಸ್ ಹುಂಡಿ, ಅಬ್ದುಲ್ ಖಾದರ್, ರಹಿಮಾನ್ ಮಠ ಅವರುಗಳು ಬರೆದ ಪ್ರಬಂಧಗಳು ತೀರ್ಪುಗಾರರ ಮೆಚ್ಚುಗೆ ಪಡೆಯಿತು.
ಉತ್ತಮ ಸಮಾಜವೊಂದರ ನಿರ್ಮಾಣಕ್ಕೆ ಪೈಗಂಬರರ ಸಂದೇಶಗಳು ಮತ್ತು ಪ್ರವಾದಿ(ಸ.ಅ) ಅವರ ಅತ್ಯುತ್ತಮ ಮಾದರಿ ಜೀವನ ವಿಷಯಗಳ ಕುರಿತು ಪ್ರಬಂಧ ಸ್ಪರ್ಧೆ ನಡೆದಿತ್ತು.
ವಿಜೇತರಾದವರಿಗೆ ನಗದು ಮತ್ತು ಇ-ಸರ್ಟಿಫಿಕೇಟ್ ಹಾಗೂ ಭಾಗವಹಿಸಿದ ಎಲ್ಲರಿಗೂ ಇ-ಸರ್ಟಿಫಿಕೇಟ್ ಕಳುಹಿಸಿ ಕೊಡಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಕುವೈತ್ ನಲ್ಲಿರುವ ಹುಸೈನ್ ಎರುಮಾಡ್ ಹಾಗೂ ಜಲೀಲ್ ನಿಜಾಮಿ ದುಬೈ ಅವರುಗಳು ಪ್ರಾಯೋಜಿಸಿದ್ದಾರೆ.
ರಾಜ್ಯದ ಗದಗ, ಬೀದರ್, ವಿಜಾಪುರ, ಹಾವೇರಿ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಹಾಸನ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು ಸೇರಿದಂತೆ ವಿವಿಧ ಜಿಲ್ಲೆಗಳ ಸ್ಪರ್ಧಿಗಳು ಪ್ರಬಂಧಗಳನ್ನು ಕಳುಹಿಸಿಕೊಟ್ಟಿದ್ದರು. ವಿಶ್ವವಿದ್ಯಾನಿಲಯಗಳ ಪ್ರೊಫೆಸರರು, ಪ್ರಾಧ್ಯಾಪಕರು, ಶಿಕ್ಷಕರು, ಸಾಹಿತಿಗಳು, ಪತ್ರಕರ್ತರು ಹಾಗೂ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ 99800 03480 ನ್ನು ಸಂಪರ್ಕಿಸಬಹುದಾಗಿದೆ.