ಚೆಟ್ಟಿಮಾನಿ ಶ್ರೀಕೃಷ್ಣ ಗೋಶಾಲೆಗೆ ಸೀರ್ವಿ ಸಮಾಜದಿಂದ ಕೊಡುಗೆ

08/11/2020

ಮಡಿಕೇರಿ ನ.8 : ಭಾಗಮಂಡಲದ ಚೆಟ್ಟಿಮಾನಿಯಲ್ಲಿರುವ ಶ್ರೀಕೃಷ್ಣ ಗೋಶಾಲೆಗೆ ಕೊಡಗಿನಲ್ಲಿರುವ ಸೀರ್ವಿ ಸಮಾಜ(ರಾಜಸ್ಥಾನ) ಕೊಡುಗೆ ನೀಡಿದೆ.
ಗೋವುಗಳಿಗಾಗಿ 2000 ಲೀಟರ್‍ನ ನೀರಿನ ಟ್ಯಾಂಕ್, ಕೆರೆಯಿಂದ ನೀರನ್ನು ಮೇಲೆತ್ತಲು ಮೋಟರ್ ಮತ್ತು ಪೈಪ್, ಬೇಲಿ ನಿರ್ಮಾಣಕ್ಕೆ 3 ರೋಲ್ ತಂತಿ ಹಾಗೂ ಒಂದು ಪಿಕಪ್ ಒಣಹುಲ್ಲನ್ನು ನೀಡಿದ್ದಾರೆ.
ಕೊಡುಗೆಯೊಂದಿಗೆ ಗೋಶಾಲೆಗೆ ಭೇಟಿ ನೀಡಿದ್ದ ಸೀರ್ವಿ ಸಮಾಜದ ಪ್ರಮುಖರಿಗೆÉ ಕೃತಜ್ಞತೆ ಸಲ್ಲಿಸಿದ ಶ್ರೀಕೃಷ್ಣ ಗೋಶಾಲೆಯ ಅಧ್ಯಕ್ಷ ಹರೀಶ್ ಜಿ.ಆಚಾರ್ಯ ಅವರು ಗೋಮಾತೆಯ ಮೇಲಿನ ಭಕ್ತಿಯಿಂದ ಕೊಡುಗೆಗಳನ್ನು ನೀಡಿದ್ದು, ಗೋಶಾಲೆಗೆ ಇದು ಹೆಚ್ಚು ಸಹಕಾರಿಯಾಗಿದೆ ಎಂದರು. ಇಲ್ಲಿಯವರೆಗೆ ಕಾರ್ಮಿಕರು ಕೆರೆಯಿಂದ ನೀರು ತಂದು ಗೋವುಗಳಿಗೆ ನೀಡುತ್ತಿದ್ದರು. ಇದೀಗ ಸೀರ್ವಿ ಸಮಾಜ ನೀಡಿರುವ ಟ್ಯಾಂಕ್ ಹಾಗೂ ಮೋಟರ್ ಗೋವುಗಳ ದಣಿವನ್ನು ಸುಲಭವಾಗಿ ನೀಗಿಸಲಿದೆ ಎಂದರು.
ಸುಮಾರು 70 ಗೋವುಗಳಿಗೆ ಆಶ್ರಯ ನೀಡಿರುವ ಶ್ರೀ ಕೃಷ್ಣ ಗೋಶಾಲೆಗೆ ಸಹಾಯ ಮಾಡುವವರು ಮೊ.ಸಂ 94801 80456 ಅಥವಾ 78992 60138 ನ್ನು ಸಂಪರ್ಕಿಸಬಹುದಾಗಿದೆ.