Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
4:59 AM Friday 22-October 2021

ವಿವಾಹದ ದಿನವೇ ದೇಹದಾನದ ಪ್ರತಿಜ್ಞೆ : ಕಿರಗಂದೂರು ಗ್ರಾಮದ ಯುವಕನಿಂದ ಜಾಗೃತಿ

08/11/2020

ಸೋಮವಾರಪೇಟೆ ನ.8 : ಕೋವಿಡ್-19 ಲಾಕ್‍ಡೌನ್ ಸಂದರ್ಭ ಹಲವು ಮದುವೆಗಳು ಆರತಕ್ಷತೆ, ಮಗುವಿನ ನಾಮಕರಣ ಮುಂತಾದ ಶುಭ ಸಮಾರಂಭಗಳು ಕೇವಲ ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ನಡೆದಿವೆ. ಆದರೆ ಸೋಮವಾರಪೇಟೆಯಲ್ಲಿ ಭಾನುವಾರದಂದು ಕಿರಗಂದೂರು ಗ್ರಾಮದ ಯುವಕ ತನ್ನ ಮದುವೆ ಆರತಕ್ಷತೆಯನ್ನು ವಿಶೇಷವಾಗಿ ನೆರವೇರಿಸಿದ್ದಾರೆ.
ಒಕ್ಕಲಿಗರ ಸಮುದಾಯಭವನದಲ್ಲಿ ನಡೆದ ಈ ವಿಶೇಷ ಆರತಕ್ಷತೆಗೆ ಸಾಕ್ಷಿಯಾದವರು ಕಿರಗಂದೂರಿನ ಕೃಷಿಕ ಗೌತಮ್ ಮತ್ತು ಅರಕಲಗೂಡುವಿನ ಕವಯತ್ರಿ ಸುಮನಾ. ಆರತಕ್ಷತೆಯ ದಿನದಂದು ಗಣ್ಯರ ಸಮ್ಮುಖದಲ್ಲಿ ದೇಹದಾನದ ಪ್ರತಿಜ್ಞೆಯೊಂದಿಗೆ ನೇತ್ರದಾನ ಜಾಗೃತಿ ಸದಸ್ಯತ್ವ ಅಭಿಯಾನ ಮತ್ತು ಆಹ್ವಾನಿತರೆಲ್ಲರಿಗೂ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ಪ್ರೇಮ ಮೆರೆದರು.
ಇದರೊಂದಿಗೆ ವಧು ಸುಮನಾ ರಚಿಸಿದ ಕವನ ಸಂಕಲನ ‘ಪರಿಣಯ’ ಬಿಡುಗಡೆ ಕಾರ್ಯಕ್ರಮವೂ ಸಹ ಇದೇ ವೇದಿಕೆಯಲ್ಲಿ ನಡೆಯಿತು.
ಮದುವೆಯ ದಿನದಂದು ದೇಹದಾನದ ಪ್ರತಿಜ್ಞೆಗೆ ವಧೂವರರ ಪೋಷಕರು ಸಮ್ಮತಿಸಿ ಸಹಿ ಹಾಕುವ ಮೂಲಕ ನೆರೆದಿದ್ದವರ ಗಮನ ಸೆಳೆದರು.
ಕವನ ಸಂಕಲನ ಬಿಡುಗಡೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಉದ್ಯಮಿ, ಸೇವಾರತ್ನ ಪ್ರಶಸ್ತಿ ಪುರಸ್ಕøತ ಹರಪಳ್ಳಿ ರವೀಂದ್ರ, ಅಂತಾರಾಷ್ಟ್ರೀಯ ಕಿಕ್ ಬಾಕ್ಸರ್ ಪೈಟರ್ ಗಿರೀಶ್ ಆರ್.ಗೌಡ, ಭಾರತ್ ಸ್ಕೌಟ್ ಮತ್ತು ಗೈಡ್ಸ್‍ನ ಹಾಸನ ಜಿಲ್ಲಾ ಜಂಟಿ ಕಾರ್ಯದರ್ಶಿ ಕಾಂಚನಾಮಾಲಾ, ಕನ್ನಡ ಸಾಹಿತ್ಯ ಪರಿಷತ್ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಎಚ್.ಜೆ.ಜವರಪ್ಪ, ಅರಕಲಗೂಡು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಎಲ್.ವಿಷ್ಣುಪ್ರಕಾಶ್, ಸಾಹಿತಿಗಳಾದ ಪಿ.ಎಸ್.ವೈಲೇಶ್, ಮಡಿಕೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅಂಗಶಾಸ್ತ್ರ ವಿಭಾಗದ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ನೇತ್ರಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಕಿರಣ್‍ಭಟ್ ಅವರುಗಳು ಭಾಗವಹಿಸಿದ್ದರು.
‘ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ದಾನವೆಂದರೆ ರಕ್ತದಾನ, ನೇತ್ರದಾನ, ಅಂಗಾಂಗ ದಾನವಾಗಿದೆ. ನಾವು ಬದುಕಿದ್ದಾಗಲೇ ರಕ್ತದಾನ ಮಾಡಬಹುದು. ಮರಣಾನಂತರ ಮಣ್ಣಲ್ಲಿ ಮಣ್ಣಾಗುವ ದೇಹವನ್ನು ದಾನ ಮಾಡಲು ಬದುಕಿರುವಾಗಲೇ ನೋಂದಣಿ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರೂ ನೇತ್ರದಾನ-ದೇಹದಾನಕ್ಕೆ ಮುಂದಾಗಲಿ, ಆ ಮೂಲಕ ನಮ್ಮ ಮರಣಾನಂತರ ಇನ್ನೊಬ್ಬರ ಬಾಳಿಗೆ ಬೆಳಕು ನೀಡುವಂತಾಗಲಿ ಎಂಬ ಉದ್ದೇಶದಿಂದ ಆರತಕ್ಷತೆ ದಿನದಂದೇ ಇಂತಹ ಪ್ರತಿಜ್ಞೆ ಕೈಗೊಂಡು ಇತರರಿಗೂ ಪ್ರೇರಣೆ ನೀಡಲು ತೀರ್ಮಾನಿಸಲಾಗಿದೆ’ ಎಂದು ಗೌತಮ್ ಮತ್ತು ಸುಮನಾ ದಂಪತಿಗಳು ತಿಳಿಸಿದ್ದಾರೆ.