ಕುಶಾಲನಗರದಲ್ಲಿ ಸ್ನೇಹಧಾರ ಮಾಸ ಪತ್ರಿಕೆ ಬಿಡುಗಡೆ

November 8, 2020

ಮಡಿಕೇರಿ ನ.8 : ಆಧುನಿಕ ಕಾಲಘಟ್ಟದಲ್ಲಿ ದೃಶ್ಯಮಾಧ್ಯಮಗಳ ನಾಗಾಲೋಟದಿಂದ ನಾಳಿನ ಸುದ್ದಿ ಅಂದೇ ದೊರೆಯುತ್ತಿದೆ. ಇದರಿಂದ ಪತ್ರಿಕಾ ಓದುಗರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಹೈಕೋರ್ಟ್ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಎಚ್.ಎಸ್‌ ಚಂದ್ರಮೌಳಿ ಅಭಿಪ್ರಾಯಪಟ್ಟರು.
ಎಸ್.ಕೆ.ಎಸ್.ಎಸ್.ಎಫ್ ಕೊಡಗು ಜಿಲ್ಲಾ ಘಟಕ ಹಾಗೂ ಎಸ್.ಕೆ.ಎಸ್.ಎಸ್.ಜಿಸಿಸಿ ಕೊಡಗು ಘಟಕದ ಸಂಯುಕ್ತಾಶ್ರಯದಲ್ಲಿ ಕುಶಾಲನಗರದಲ್ಲಿ ಬಿಡುಗಡೆಗೊಂಡ  ಸತ್ಯದೆಡೆಗೆ ದಿಟ್ಟ ಹೆಜ್ಜೆ ಶೀರ್ಷಿಕೆಯಡಿ “ಸ್ನೇಹಧಾರ ” ಎಂಬ ನೂತನ ಮಾಸ ಪತ್ರಿಕೆಯ  ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಪತ್ರಿಕೆಯನ್ನು ಮುನ್ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ.ಹಲವಾರು ಸವಾಲುಗಳನ್ನು ಎದುರಿಸಿ ನೂತನ ಪತ್ರಿಕೆಯನ್ನು ಮುನ್ನಡೆಸಬೇಕಾದ ಅನಿವಾರ್ಯತೆ ಎದುರಾಗುತ್ತದೆ.ಮುಂದಿನ ದಿನಗಳಲ್ಲಿ ನೂತನ ಮಾಸ ಪತ್ರಿಕೆಗೆ ಆರ್ಥಿಕ ಸಂಕಷ್ಟ ಎದುರಾಗಬಹುದು.ಆದರೆ ಎಲ್ಲವನ್ನೂ ಸವಾಲಾಗಿ ಸ್ವೀಕರಿಸಿ ಸ್ನೇಹಧಾರ ಮಾಸ ಪತ್ರಿಕೆ ಜನ ಧ್ವನಿಯಾಗಲಿ ಎಂದು ಚಂದ್ರಮೌಳಿ ಹೇಳಿದರು.
ಸಾಮಾಜಿಕ ಜಾಲತಾಣದ ಹಾವಳಿಯಿಂದ , ಎಲ್ಲರಿಗೂ ಬೆರಳ ತುದಿಯಲ್ಲಿ ಸುದ್ದಿಗಳು ದೊರಕುತ್ತಿದೆ.ಕೆಲವೊಂದು ಸುದ್ದಿಗಳು ಸತ್ಯಾಸತ್ಯತೆಗೆ ದೂರವಾಗಿರುತ್ತದೆ.ಹಲವಾರು ವರ್ಷಗಳ ಇತಿಹಾಸವಿರುವ ಪತ್ರಿಕೆಗೆಗಳು ನಶಿಸಿಹೋಗಿದೆ.ದಿನ ಪತ್ರಿಕೆಗಳು ಆರ್ಥಿಕ ಸಮಸ್ಯೆಯನ್ನ ಎದುರಿಸುತ್ತಿದೆ.ಕೊರೊನಾ ಸೋಂಕಿನಿಂದ ಉಂಟಾದ  ಹಲವಾರು ಪತ್ರಿಕೆಗಳಿಗೆ ಭಾರಿ ಪ್ರಮಾಣದ ಆರ್ಥಿಕ ಸಂಕಷ್ಟ ಉಂಟಾಗಿದೆ.ಜಾಹೀರಾತುಗಳು ಉಳ್ಳವರ ಪಾಲಾಗುತ್ತಿದೆ ಎಂದು ಚಂದ್ರಮೌಳಿ ಹೇಳಿದರು.
ಸ್ನೇಹಧಾರ ಮಾಸ ಪತ್ರಿಕೆ ತನ್ನ ಹೆಸರಿನಂತೆ ಎಲ್ಲಾ ಜಾತಿ ಧರ್ಮವನ್ನು ಒಗ್ಗೂಡಿಸಿ,ಸಮಾಜದಲ್ಲಿನ ಅಭಿವೃದ್ಧಿಗೆ ಹೊಸ ಅಧ್ಯಾಯನ್ನವನ್ನು ಸ್ನೇಹಧಾರ ಮಾಸ ಪತ್ರಿಕೆ ಸೃಷ್ಟಿಸಲಿ ಎಂದು ಹೈಕೋರ್ಟ್  ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಮುಖಂಡ  ಎಚ್.ಎಸ್ ಚಂದ್ರಮೌಳಿ ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾದ ಕೊಡಗು  ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಮಾತನಾಡಿ, ಭಾರತ ದೇಶವು ವಿವಿಧತೆಯಲ್ಲಿ ಏಕತೆ ಕಂಡ ರಾಷ್ಟ್ರವಾಗಿದೆ.ಭಾರತ ದೇಶವನ್ನು ಒಂದು ಜಾತಿ,ಧರ್ಮಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ.ಇತರೆ ಬೇರೆ ದೇಶಗಳಿಗಿಂತ ನಮ್ಮ‌ ದೇಶದಲ್ಲಿನ ಸಂಸ್ಕೃತಿ ವಿಭಿನ್ನವಾಗಿದೆ.ಎಲ್ಲಾ ಜಾತಿ,ಧರ್ಮದವ ಹಬ್ಬಗಳಲ್ಲಿ ವಿಶೇಷತೆಗಳು ಅಡಕವಾಗಿದೆ ಎಂದು ಹೇಳಿದರು.ಸಮಾಜದಲ್ಲಿ ನಡೆಯುವ ವಿದ್ಯಮಾನಗಳನ್ನು ಮುಟ್ಟಿಸಲು ನಮ್ಮ ಮುಂದೆ ಹಲವಾರು ವೇದಿಕೆಗಳಿವೆ.ಸ್ಥಳೀಯ ಭಾಷೆಗಳನ್ನು ಕಲಿತು, ಎಲ್ಲರೊಂದಿಗೆ ಬೆರೆತು ಜೀವಿಸಬೇಕಾಗಿದೆ ಎಂದರು.ಸ್ನೇಹಧಾರ ಮಾಸ ಪತ್ರಿಕೆ ಎಲ್ಲರ ಕೈಗಳಿಗೆ ಮುಂದಿನ ದಿನಗಳಲ್ಲಿ ತಲುಪುವಂತಾಗಲಿ ಎಂದು ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ  ಅಜ್ಜಮಾಡ ರಮೇಶ್ ಕುಟ್ಟಪ್ಪ ಅಭಿಪ್ರಾಯಪಟ್ಟರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ಸಮಸ್ತ‌ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ಲಾ ಫೈಝಿ ಮಾತನಾಡಿ, ಹಲವಾರು ವರ್ಷಗಳ ಕನಸು ನನಸಾಗಿದೆ.ಪತ್ರಿಕೆಯ ಯಶಸ್ಸಿಗೆ ಪ್ರತಿಯೊಬ್ಬ ಎಸ್.ಕೆ.ಎಸ್.ಎಸ್‌.ಎಫ್ ಕಾರ್ಯಕರ್ತರು ಶ್ರಮಿಸಬೇಕಾಗಿದೆ.ಮುಂದಿನ ದಿನಗಳಲ್ಲಿ ಸ್ನೇಹಧಾರ ಮಾಸ ಪತ್ರಿಕೆ, ವಾರ ಪತ್ರಿಕೆಯಾಗಿ, ದಿನಪತ್ರಿಕೆಯಾಗಿ ಹೊರಹೊಮ್ಮಲಿ ಎಂದು ಅಬ್ದುಲ್ಲ ಫೈಝಿ‌ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಎಸ್‌.ಕೆ.ಎಸ್.ಎಸ್.ಎಫ್ ಜಿಲ್ಲಾ ಸಮಿತಿ ಅಧ್ಯಕ್ಷರಾದ ತಮ್ಲಿಕ್ ದಾರಿಮಿ, ಎಸ್.ಕೆ.ಎಸ್‌.ಎಸ್.ಎಫ್ ಕಳೆದ ಹಲವಾರು ವರ್ಷಗಳಿಂದ ಸೌಹಾರ್ದಯುತ ಸಮಾಜವನ್ನು ಸೃಷ್ಟಿಸಲು ಕಾರ್ಯನಿರ್ವಹಿಸುತ್ತಿದೆ.ಶೈಕ್ಷಣಿಕ ರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ  ಎಂದರು.ಇದೀಗ ಸ್ನೇಹಧಾರ ಮಾಸ ಪತ್ರಿಕೆಯನ್ನ ಬಿಡುಗಡೆಗೊಳಿಸಿದ್ದೇವೆ.ಪತ್ರಕೆಯ ಯಶಸ್ಸಿಗೆ ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಅನಿವಾಸಿ ಭಾರತೀಯ ದೊಡ್ಡ ಪರಿಶ್ರಮವನ್ನು ತಮ್ಲಿಕ್ ದಾರಿಮಿ ಶ್ಲಾಘಿಸಿದರು.
ಯುವ ಪತ್ರಕರ್ತ ಇಸ್ಮಾಯಿಲ್  ಕಂಡಕರೆ ಮಾತನಾಡಿ, ನೂತನ ಮಾಸ ಪತ್ರಿಕೆಯನ್ನು ಮುನ್ನಡೆಸುವುದು ಸವಾಲಿನ ಕೆಲಸವಾಗಿದೆ.ಎಲ್ಲಾ ಸವಾಲುಗಳನ್ನು ಸ್ವೀಕರಿಸಿ,ಎಸ್‌.ಕೆ.ಎಸ್.ಎಸ್.ಎಫ್ ಬಳಗ ಸ್ನೇಹಧಾರ ಮಾಸ ಪತ್ರಿಕೆಯನ್ನ  ಮುನ್ನಡೆಸುಕೊಂಡು ಹೋಗಬೇಕಾಗಿದೆ.ಪತ್ರಿಕೆಯು ಒಂದು ಸಂಘಟನೆಗೆ ಸೀಮಿತವಾಗದೆ, ಜಿಲ್ಲೆಯ ಎಲ್ಲಾ ಜನರ ಧ್ವನಿಯಾಗಲಿ ಎಂದು ಪತ್ರಕರ್ತ ಇಸ್ಮಾಯಿಲ್ ಕಂಡಕರೆ ಹೇಳಿದರು.
ಸ್ನೇಹಧಾರ ಮಾಸ ಪತ್ರಿಕೆಯ ಪರಿಚಯವನ್ನು ಸಿ.ಎಂ ಹಮೀದ್ ಮುಸ್ಲಿಯಾರ್ ಮಾಡಿದರು. ಎಸ್.ಕೆ.ಎಸ್.ಎಸ್.ಎಫ್ ಪ್ರಧಾನ ಕಾರ್ಯದರ್ಶಿ ಸುಹೈಬ್ ಫೈಝಿ ಕೊಳಕೇರಿ ಸ್ವಾಗತಿಸಿದರು.ಬಾದ್ಶಾ ಶಮ್ಲಿ ಕಾರ್ಯಕ್ರಕ ನಿರೂಪಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ ಜಯವರ್ಧನ್, ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ರಫೀಕ್ ಸುಂಟಿಕೊಪ್ಪ,ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಎ ಯಾಕೂಬ್, ಸಮಾಜ ಸೇವಕ ಹೋರಾಟಗಾರ ನೌಷಾದ್ ಜನ್ನತ್,ಉಮ್ಮರ್ ಫೈಜಿ,ಉಸ್ಮಾನ್ ಫೈಜಿ, ಅಶ್ರಫ್ ಮಿಸ್ಬಾಹಿ, ಹಾರೂನ್ ಹಾಜಿ ಮಡಿಕೇರಿ, ಇಕ್ಬಾಲ್ ಉಸ್ತಾದ್,ಝೈನುದ್ದೀನ್ ಫೈಜಿ ಇದ್ದರು.

error: Content is protected !!