ಹಡಗು ಸಚಿವಾಲಯಕ್ಕೆ ಮರುನಾಮಕರಣ

November 9, 2020

ಅಹಮದಾಬಾದ್ ನ.9 : ಹಡಗು ಸಚಿವಾಲಯವನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ಗುಜರಾತ್ ನ ಭಾವ್ನಗರ ಜಿಲ್ಲೆಯ ಘೋಘಾ ಮತ್ತು ಸೂರತ್ ನ ಹಝಿರಾ ಮಧ್ಯೆ ರೊ-ಪಾಕ್ಸ್ ಹಡಗು ಸೇವೆಯನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟನೆಗೊಳಿಸಿ ಮಾತನಾಡಿದರು. ಈ ಹಡಗು ಸೇವೆಯಿಂದಾಗಿ ಸುಮಾರು 317 ಕಿಲೋ ಮೀಟರ್ ದೂರದ ಪ್ರಯಾಣ ಕಡಿಮೆಯಾಗಿ ಸಮುದ್ರ ಮಾರ್ಗದ ಮೂಲಕ 60 ಕಿಲೋ ಮೀಟರ್ ಪ್ರಯಾಣ ಸಾಗಬಹುದು.
ದೇಶದ ಸಮುದ್ರ ಮಾರ್ಗವನ್ನು ಮುಂದಿನ ದಿನಗಳಲ್ಲಿ ಪ್ರಮುಖ ಪ್ರಯಾಣ ಮಾರ್ಗಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದ್ದು ಆತ್ಮನಿರ್ಭರ ಭಾರತದ ಕಡೆಗೆ ಪ್ರಮುಖ ಹೆಜ್ಜೆಯಾಗಿದೆ. ಸರ್ಕಾರದ ಪ್ರಯತ್ನಕ್ಕೆ ಮತ್ತೊಂದು ದಿಟ್ಟ ಹೆಜ್ಜೆಯನ್ನಿಡಲಾಗಿದೆ ಎಂದರು.

error: Content is protected !!