ಗೋಸ್ವಾಮಿ ಟಲೋಜ ಜೈಲಿಗೆ ಸ್ಥಳಾಂತರ

November 9, 2020

ಮುಂಬೈ ನ.9 : ವಾಸ್ತುಶಿಲ್ಪಿ ಅನ್ವಯ್ ನಾಯಕ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ರಿಪಬ್ಲಿಕ್ ಟಿವಿ ಮಾಲೀಕ ಮತ್ತು ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ, ಅಲಿಬಾಗ್ ಕ್ವಾರಂಟೈನ್ ಕೇಂದ್ರದಲ್ಲಿ ಮೊಬೈಲ್ ಉಪಯೋಗಿಸಿದ್ದಕ್ಕೆ ಟಲೋಜ ಜೈಲಿಗೆ ಸ್ಥಳಾಂತರ ಮಾಡಲಾಗಿದೆ.
ನವೆಂಬರ್ ನಾಲ್ಕರಿಂದ ನ್ಯಾಯಾಂಗ ಬಂಧನದಲ್ಲಿರುವ ಗೋಸ್ವಾಮಿ ವಿರುದ್ಧದ ಎಫ್ ಐಆರ್ ನ್ನು ಬಾಂಬೆ ಹೈಕೋರ್ಟ್ ರದ್ದುಪಡಿಸಿದೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ವಿಚಾರಣಾಧಿಕಾರಿ ಜಮಿಲ್ ಶೇಖ್, ವೋರ್ಲಿಯಲ್ಲಿನ ನಿವಾಸದಲ್ಲಿ ಬುಧವಾರ ಅರ್ನಾಬ್ ಗೋಸ್ವಾಮಿಯನ್ನು ಬಂಧಿಸಿದ ನಂತರ ಅವರ ಬಳಿಯಿದ್ದ ಮೊಬೈಲ್ ಫೋನ್ ನ್ನು ವಶಪಡಿಸಿಕೊಳ್ಳಲಾಗಿತ್ತು. ಆದಾಗ್ಯೂ. ಇನ್ನೊಂದು ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವುದಾಗಿ ಕಂಡು ಬಂದಿದೆ ಎಂದರು.