ಭಾರತೀಯರಿಗೆ ಅಮೆರಿಕ ನಾಗರಿಕತ್ವ

November 9, 2020

ವಾಷಿಂಗ್ಟನ್ ನ.9 : ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡನ್ ಆಯ್ಕೆಯಾದ ಬೆನ್ನಲ್ಲೇ ಬೈಡನ್ ಸರ್ಕಾರ ಅನಿವಾಸಿ ಭಾರತೀಯರಿಗೆ ಗುಡ್ ನ್ಯೂಸ್ ನೀಡಿದ್ದು, 5 ಲಕ್ಷ ಭಾರತೀಯರಿಗೆ ಅಮೆರಿಕ ನಾಗರಿಕತ್ವ ನೀಡಲು ಮುಂದಾಗಿದೆ.
ಜೋ ಬೈಡನ್ ಮತ್ತು ಭಾರತ ಮೂಲದ ಕಮಲಾ ಹ್ಯಾರಿಸ್ ಸರ್ಕಾರ ಅನಿವಾಸಿ 5 ಲಕ್ಷ ಭಾರತೀಯರೂ ಸೇರಿದಂತೆ 11ಸ ಲಕ್ಷ ವಿದೇಶಿ ವಲಸಿಗರಿಗೆ ಅಮೆರಿಕ ನಾಗರಿಕತ್ವ ನೀಡುವ ಕುರಿತು ನಿರ್ಧರಿಸಿದೆ. ಅಂತೆಯೇ ನಾಗರಿಕತ್ವ ವಿತರಣೆಗೆ ವಾರ್ಷಿಕ 95,000 ಮಿತಿ ಹೇರಲಾಗಿದ್ದು, ಈ ಕುರಿತಂತೆ ಬೈಡನ್ ಕ್ಯಾಂಪೇನ್ ಪಾಸಲಿಸಿ ಡಾಕ್ಯುಮೆಂಟ್ ನಲ್ಲಿ ತಿಳಿಸಲಾಗಿದೆ.
ಅಮೆರಿಕದಲ್ಲಿ ಕೆಲಸಕ್ಕಾಗಿ ಬಂದ ವಿವಿಧ ದೇಶಗಳ ಸುಮಾರು 11 ಲಕ್ಷ ವಲಸಿಗರಿದ್ದು, ಈ ಪೈಕಿ ಭಾರತದ ಮೂಲದ 5ಲಕ್ಷ ವಲಸಿಗರಿದ್ದಾರೆ. ಈ ವಲಸಿಗರಿಗೆ ನಾಗರಿಕತ್ವ ನೀಡಲು ಬೈಡನ್ ಸರ್ಕಾರ ನೀತಿ ಜಾರಿಗೆ ತರಲು ಮುಂದಾಗಿದೆ. ಬೈಡನ್ ಸರ್ಕಾರ ಈ ನೀತಿಯ ಪ್ರಕಾರ, ವಲಸೆ ಸುಧಾರಣಾ ಕಾನೂನು ಜಾರಿಗೊಳಿಸುವುದಕ್ಕೆ, ಅದಕ್ಕೆ ಸಂಬಂಧಿಸಿದ ಮಸೂದೆ ಸಿದ್ಧಪಡಿಸಿ ಅಂಗೀಕರಿಸುವುದಕ್ಕಾಗಿ ಬೈಡನ್ ಅವರು, ಕಾಂಗ್ರೆಸ್ ಜೊತೆಗೂಡಿ ಶೀಘ್ರವೇ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಅಮೆರಿಕಕ್ಕೆ ವಲಸೆ ಬರುವ ಉದ್ಯೋಗಸ್ಥರ ಕುಟುಂಬಗಳೂ ಕೂಡ ಒಟ್ಟಿಗೆ ಇರಿಸುವ ಪ್ರಯತ್ನ ಇದಾಗಿದೆ.

error: Content is protected !!