ಏಲಕ್ಕಿ ಮಾರಾಟ ಸಹಕಾರ ಸಂಘದ ಚುನಾವಣೆ : ರೈತ ಮಿತ್ರ ಕೂಟಕ್ಕೆ ಭರ್ಜರಿ ಜಯ

09/11/2020

ಮಡಿಕೇರಿ ನ.9 : ಕೊಡಗು ಏಲಕ್ಕಿ ಮಾರಾಟ ಸಹಕಾರ ಸಂಘದ 2020-25ರ ಅವಧಿಗೆ ಆಡಳಿತ ಮಂಡಳಿ ಚುನಾವಣೆ ಮಡಿಕೇರಿ ಕೊಡವ ಸಮಾಜದಲ್ಲಿ ನಡೆಯಿತು. ಒಟ್ಟು 17 ಸ್ಥಾನಗಳ ಪೈಕಿ 11 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಮಡಿಕೇರಿ ತಾಲ್ಲೂಕಿನ ಐದು ಸಾಮಾನ್ಯ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ಸೂದನ ಎಸ್.ಈರಪ್ಪ ಅವರಿಗೆ 187 ಮತಗಳು, ಕೋಳುಮುಡಿಯನ ಅನಂತಕುಮಾರ್‍ಗೆ 166 ಮತಗಳು, ಕುಂಬುಗೌಡನ ವಿನೋದ್ ಕುಮಾರ್‍ಗೆ 149, ಮಂದ್ರೀರ ಜಿ. ಮೋಹನ್‍ದಾಸ್ 148, ಅಜ್ಜಿನಂಡ ಎಂ. ಗೋಪಾಲಕೃಷ್ಣ 118 ಮತಗಳನ್ನು ಪಡೆದು ಗೆಲುವು ಪಡೆದರು.
ಪರಾಜಿತರಾದ ಬೆಪ್ಪುರನ ಎಂ. ಬೋಪಯ್ಯ 113, ಚೊಂಡಿರ ಚಂಗಪ್ಪ 94, ಪಟ್ಟಡ ಎಂ. ಉಲ್ಲಾಸ 68, ಚೆನಂಡ ಗಿರೀಶ್ ಪೂಣಚ್ಚ 68, ಕೇಕಡ ಎಂ.ಗಿರೀಶ್ 68, ಮಂಡುವಂಡ ಬಿ. ಜೋಯಪ್ಪ 38 ಮತಗಳನ್ನು ಪಡೆದರು. ಇಲ್ಲಿ ಐದು ಸ್ಥಾನಗಳಿಗೆ 11 ಮಂದಿ ಸ್ಪರ್ಧಿಸಿದರು.
ತೀವ್ರ ಪೈಪೋಟಿ ಇದ್ದ ಸೋಮವಾರಪೇಟೆಯಲ್ಲಿ ಮೂರು ಸ್ಥಾನಗಳಿಗೆ ಆರು ಮಂದಿ ಕಣದಲ್ಲಿದ್ದರು.
ಕೆ.ಕೆ. ಗೋಪಾಲ 158, ಸಿ.ಸಿ. ವಿಜಯ ಕುಮಾರ್ 145, ಬಿ.ಈ.ಬೋಪಯ್ಯ ಅವರು 143 ಮತಗಳನ್ನು ಪಡೆದು ಗೆಲುವು ಸಾಧಿಸಿದರು.
ಸೋಲುಕಂಡ ರಾಜು ಸಿ. ದಳವಾಯಿ 138, ಸಿ.ಎನ್. ತಮ್ಮಯ್ಯ 111, ಎ.ಹೆಚ್. ರವಿ 98 ಮತಗಳನ್ನು ಪಡೆದರು. ಹಾಲಿ ಅಧ್ಯಕ್ಷ ಬಿ.ಈ.ಬೋಪಯ್ಯ ಅವರು ಗೆಲುವು ಸಾಧಿಸಿದರು.
ವಿರಾಜಪೇಟೆ ಕ್ಷೇತ್ರದ ಮೂರು ಸ್ಥಾನಗಳಿಗೆ ಐದು ಮಂದಿ ಸ್ಪರ್ಧಿಸಿದ್ದು, ಮಿತ್ರ ಕೂಟದಿಂದ ಎಸ್.ಎಸ್. ಸುರೇಶ್, ಕೊಣಿಯಂಡ ಬೋಪಣ್ಣ, ಪೆಮ್ಮಂಡ ಬೋಪಣ್ಣ ಅವಿರೋಧವಾಗಿ ಆಯ್ಕೆಯಾದರು.
ಮಾಜಿ ಅಧ್ಯಕ್ಷ ಚೊಟು ಕಾವೇರಿ, ಮಾಜಿ ನಿರ್ದೇಶಕ ಚಂಗಪ್ಪ ಅವರು ನಾಮಪತ್ರ ವಾಪಾಸ್ಸು ಪಡೆದಿದ್ದರು.
ಮಹಿಳಾ ಮಿಸಲು ಸ್ಥಾನದ ಎರಡು ಸ್ಥಾನಗಳಿಗೆ ನಾಲ್ಕು ಮಂದಿ ಸ್ಪರ್ಧಿಸಿದ್ದು, ಪರಿವಾರ ಎಸ್. ಕವಿತ 306, ಅಂಬೆಕಲ್ಲು ಸುಶೀಲ ಕುಶಾಲಪ್ಪ 301 ಮತಗಳನ್ನು ಪಡೆದು ಗೆಲುವು ಕಂಡರು.
ಪರಾಜಿತರಾದ ಯಾಲದಾಳು ಸಾವಿತ್ರಿ 234, ಹೆಚ್.ಡಿ. ಹೇಮಂತ ಕುಮಾರಿ 219 ಮತಗಳನ್ನು ಪಡೆದರು.
ಪರಿಶಿಷ್ಟ ಜಾತಿಯ ಮೀಸಲು ಕ್ಷೇತ್ರದಿಂದ ಬೊಳ್ಳು ಎ. ಹರಿಜನ 294 ಮತ ಪಡೆದು ಗೆಲುವು ಕಂಡು, ಹೆಚ್. ಈ ರಾಜು 253 ಮತ ಪಡೆದು ಪರಾಜಿತರಾದರು.
ಬಿ.ಸಿ.ಎಂ(ಬಿ) ಕ್ಷೇತ್ರದಿಂದ ಪೇರಿಯನ ಪಿ.ಉದಯ ಕುಮಾರ್ ಹಾಗೂ ಹಾಲಿ ನಿರ್ದೇಶರಾಗಿದ್ದ ಅಯ್ಯಣ್ಣ ನಾಮ ಪತ್ರ ಸಲ್ಲಿಸಿ ವಾಪಸ್ಸು ಪಡೆದರು. ಉದಯ ಕುಮಾರ್ ಅವಿರೋಧವಾಗಿ ಆಯ್ಕೆಯಾದರು.
ಬಿ.ಸಿ.ಎಂ(ಎ) ಕ್ಷೇತ್ರದಿಂದ ಹಾಲಿ ನಿರ್ದೇಶಕ ಬಿದ್ದಿಯಂಡ ಗಣಪತಿ ಹಾಗೂ ಹಾಲಿ ನಿರ್ದೇಶಕ ಬಿ.ಸಿ.ಚೆನ್ನಪ್ಪ ನಾಮ ಪತ್ರ ಸಲ್ಲಿಸಿದ್ದು, ಬಿದ್ದಿಯಂಡ ಗಣಪತಿ ನಾಮಪತ್ರ ವಾಪಾಸ್ಸು ಪಡೆದಿದ್ದರಿಂದ ಬಿ.ಸಿ. ಚೆನ್ನಪ್ಪ ಅವಿರೋಧ ಆಯ್ಕೆಯಾದರು.
ಗೆಲುವಿನ ಬಗ್ಗೆ ಹರ್ಷ ವ್ಯಕ್ತಪಡಿಸಿದ ರೈತ ಮಿತ್ರ ಕೂಟದ ಪ್ರಮುಖ ಸೂದನ ಈರಪ್ಪ, ಸಾಮಾನ್ಯವಾಗಿ ಸಹಕಾರ ಕ್ಷೇತ್ರಗಳಲ್ಲಿ ರಾಜಕೀಯ ಪಕ್ಷಗಳಲ್ಲಿ ಅಧಿಕಾರಕ್ಕಾಗಿ ಗುಂಪು ನಡೆಯುತ್ತಿರುವುದು ಸಂಘದ ಪ್ರಗತಿಗೆ ಹಾಗೂ ರೈತಾಪಿ ವರ್ಗಕ್ಕೆ ಆಗುವ ಅನ್ಯಾಯವೆನ್ನಬಹುದು. ಆದರೆ ಕೂಟದ ಅಭ್ಯರ್ಥಿಗಳಲ್ಲಿ ಎಲ್ಲೂ ಕೂಡ ರಾಜಕೀಯ ಹಾಗೂ ಜಾತಿಯ ಸೋಂಕು ತಟ್ಟದಂತೆ ಎಚ್ಚರವಹಿಸಿ ತಂತ್ರಗಾರಿಕೆಯಿಂದ 17 ಸ್ಥಾನಗಳಲ್ಲಿ 15ನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
ಮುಂದಿನ ದಿನಗಳಲ್ಲೂ ಸಹಕಾರಿ ಕ್ಷೇತ್ರದ ಚುನಾವಣೆಗಳಲ್ಲಿ ರೈತ ಮಿತ್ರ ಕೂಟ ಯಶಸ್ಸನ್ನು ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.