ಸೀರತ್ ಅಭಿಯಾನ : ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾರಿಗೆ ಪುಸ್ತಕ ವಿತರಣೆ

09/11/2020

ಮಡಿಕೇರಿ ನ.9 : “ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ” ಎಂಬ ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ  ರಾಜ್ಯಾದ್ಯಂತ ನಡೆಯುತ್ತಿರುವ ಸೀರತ್ ಅಭಿಯಾನದ ಪ್ರಯುಕ್ತ ಕೊಡಗು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ  ಕ್ಷಮಾ ಮಿಶ್ರಾ ಅವರನ್ನು ಜಿಲ್ಲಾ ಸಮಿತಿ ಭೇಟಿ ಮಾಡಿ ಅಭಿಯಾನದ ಬಗ್ಗೆ ಮಾತನಾಡಿ ಸಾಹಿತ್ಯ ಪುಸ್ತಕಗಳನ್ನು ನೀಡಿತು. ಜಮಾಅತೆ ಇಸ್ಲಾಮೀ ಹಿಂದ್  ವಲಯ ಸಂಚಾಲಕರಾದ ಅಬ್ದುಲ್ ಸಲಾಮ್.ಯು , ಸ್ಥಾನೀಯ ಅಧ್ಯಕ್ಷರಾದ ಜಿ.ಹೆಚ್ ಮುಹಮ್ಮದ್ ಹನೀಫ್ , ಜಿಲ್ಲಾ ಸಾರ್ವಜನಿಕ ಸಂಪರ್ಕ ‌‌ವಿಭಾಗದ ಸಂಚಾಲಕ ಸಿ.ಹೆಚ್ ಅಫ್ಸರ್ , ಜಿಲ್ಲಾ ಸಂಚಾಲಕಿ  ವಹಿದಾ ಶೌಕತ್, ಸದಸ್ಯೆ ಮುಹೀನ ಮುಹಮ್ಮದ್ ಹಾಗೂ  ಕಾರ್ಯಕರ್ತೆ  ಮಫೀದ ಅಬ್ದುಲ್ಲಾ ಈ ಸಂದರ್ಭದಲ್ಲಿ  ಉಪಸ್ಥಿತರಿದ್ದರು.