ಒಳಮೀಸಲಾತಿ ಕುರಿತು ಸಂವಾದ : ಸುಂಟಿಕೊಪ್ಪದಲ್ಲಿ ಪೂರ್ವಭಾವಿ ಸಭೆ : ದಸಂಸ ಗೆ ಪದಾಧಿಕಾರಿಗಳ ಆಯ್ಕೆ

09/11/2020

ಮಡಿಕೇರಿ ನ.9 : ಪ್ರೊ.ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ನ.29 ರಂದು ನಡೆಯುವ ಸಂವಾದ ಕಾರ್ಯಕ್ರಮದ ಪೂರ್ವಭಾವಿ ಸಭೆ ಸುಂಟಿಕೊಪ್ಪದ ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಸಮಿತಿಯ ಕೊಡಗು ಉಸ್ತುವಾರಿ ರಾಜ್ಯ ಸಂಘಟನಾ ಸಂಚಾಲಕ ವಿಜಯ ನರಸಿಂಹ (ಚಿಂತಾಮಣಿ, ಚಿಕ್ಕಬಳ್ಳಾಪುರ) ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನ.29 ರಂದು ಮಡಿಕೇರಿಯಲ್ಲಿ ಒಳಮೀಸಲಾತಿ ಕುರಿತು ಏರ್ಪಡಿಸಿರುವ ಸಂವಾದ ಕಾರ್ಯಕ್ರಮದ ಬಗ್ಗೆ ಚರ್ಚಿಸಲಾಯಿತು.
ಇದೇ ಸಂದರ್ಭ ಸಮಿತಿಯ ಕೊಡಗು ಜಿಲ್ಲಾ ಘಟಕವನ್ನು ಅಧಿಕೃತಗೊಳಿಸಿ ಜಿಲ್ಲಾ ಸಂಚಾಲಕರನ್ನಾಗಿ ಕುಶಾಲನಗರ ಮಾದಪಟ್ಟಣದ ಹೆಚ್.ಜೆ.ದಾಮೋದರ್ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಸಂಘಟನಾ ಸಂಚಾಲಕರುಗಳಿಗೆ ವಿವಿಧ ವಿಭಾಗಗಳ ಜವಾಬ್ದಾರಿಯನ್ನು ನೀಡಲಾಯಿತು.
ಚರ್ಮ ಕಾರ್ಮಿಕ, ಪೌರಕಾರ್ಮಿಕರ ವಿಭಾಗದ ಮುಖ್ಯಸ್ಥರನ್ನಾಗಿ ರಂಗಣ್ಣ, ಆಂತರಿಕ ಶಿಸ್ತು ಮತ್ತು ತರಬೇತಿ ವಿಭಾಗಕ್ಕೆ ಹೆಚ್.ಮಹದೇವ್, ಕುಂದು ಕೊರತೆಗಳ ವಿಭಾಗಕ್ಕೆ ಹೆಚ್.ಎಲ್.ಕುಮಾರ್, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿಭಾಗಕ್ಕೆ ನಾಸರ್ ಪಾಲಿಬೆಟ್ಟ, ಧಮ್ಮ ಮತ್ತು ಪ್ರಕಾಶನ ವಿಭಾಗಕ್ಕೆ ಎಂ.ಎಸ್.ಶೇಖರ್, ಅಂತರ್ ಜಿಲ್ಲಾ ಸಂವಹನ ವಿಭಾಗಕ್ಕೆ ಹೆಚ್.ಮಂಜುನಾಥ್, ಅಸಂಘಟಿತ ಕಾರ್ಮಿಕ ವಿಭಾಗಕ್ಕೆ ಹೆಚ್.ಜಿ.ರಘು ಅವರುಗಳನ್ನು ನೇಮಕ ಮಾಡಲಾಯಿತು.
ಜಿಲ್ಲಾ ಖಜಾಂಚಿಯಾಗಿ ಗಾಯತ್ರಿ ನರಸಿಂಹ, ಜಿಲ್ಲಾ ಸಮಿತಿಯ ಸದಸ್ಯರುಗಳಾಗಿ ಎಸ್.ವಿ.ರಾಮದಾಸ್, ಹೆಚ್.ಎನ್.ಕುಮಾರ್, ಹೆಚ್.ಟಿ.ಕಾವೇರಪ್ಪ, ಹೆಚ್.ಸಂಜೀವ, ಶಿವಪ್ಪ, ಹೆಚ್.ಪಿ.ಶಿವಕುಮಾರ್ ಅವರು ಆಯ್ಕೆಯಾದರು.
ಸುಂಟಿಕೊಪ್ಪ ಅಂಬೇಡ್ಕರ್ ಭವನದ ಗೌರವ ಅಧ್ಯಕ್ಷ ಹೆಚ್.ಎಸ್.ಬೆಟ್ಟಪ್ಪ ಅವರ ಸಹಕಾರದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸಮಿತಿ ಸದಸ್ಯ ಕೆ.ಪಳನಿಪ್ರಕಾಶ್, ಮಹೇಶ್.ಜೆ, ಸುರೇಶ್ ಮಹೇಶ್, ಲತೀಶ್ ಕುಮಾರ್, ರಾಜು, ಶಿವು, ರವಿ ಉಲುಗುಲಿ, ಶಶಿ ಉಲುಗುಲಿ, ಚಂದ್ರಮಣಿ ಹಾಗೂ ಕಾರ್ಯಕರ್ತರು ಹಾಜರಿದ್ದರು.