ಶಬರಿಮಲೆ ಭಕ್ತರಿಗೆ ಮಾರ್ಗಸೂಚಿ ಬಿಡುಗಡೆ

10/11/2020

ತಿರುವನಂತಪುರಂ ನ.10 : ಶಬರಿಮಲೆ ದೇವಸ್ಥಾನಕ್ಕೆ ಹೋಗುವ ಭಕ್ತರಿಗಾಗಿ ಕೇರಳ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಏಳು ಮಾರ್ಗ ಸೂಚಿಗಳನ್ನು ಒಳಗೊಂಡ ಪ್ರಕಟಣೆಯನ್ನು ಧಾರ್ಮಿಕ ದತ್ತಿ ಇಲಾಖೆ ಕನ್ನಡದಲ್ಲೇ ಬಿಡುಗಡೆ ಮಾಡಿದೆ.
ಶಬರಿಮಲೆ ವೆಬ್ ಸೈಟ್ ನಲ್ಲಿ ನೊಂದಾಯಿಸಿಕೊಂಡು ಅನುಮತಿ ಪಡೆದ ಭಕ್ತರಿಗಷ್ಟೆ ಅವಕಾಶ ನೀಡಲಾಗುತ್ತದೆ. ಪ್ರತಿದಿನ 1 ಸಾವಿರ ಭಕ್ತರಿಗೆ ವಾರಾಂತ್ಯದಲ್ಲಿ 2 ಸಾವಿರ ಭಕ್ತರಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ದೇವಸ್ಥಾನ ಭೇಟಿಯ 48 ಗಂಟೆ ಅವಧಿಗೆ ಮೊದಲು ಕೋವಿಡ್ ಟೆಸ್ಟ್ ಮಾಡಿಸಿದ ಸರ್ಟಿಫಿಕೇಟ್ ಹೊಂದುವುದು ಕಡ್ಡಾಯ. 10 ವರ್ಷದ ಒಳಗಿನ ಮಕ್ಕಳು 60-65 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಅನಾರೋಗ್ಯದಿಂದ ನಳಲುತ್ತಿರುವವರಿಗೆ ಪ್ರವೇಶ ನಿರಾಕರಣೆ.
ಬಿಪಿಎಲ್ ಕಾರ್ಡ್ ಅಥವಾ ಆಯುಷ್ಮಾನ್ ಕಾರ್ಡ್ ಹೊಂದಿದ್ದರೆ ಅದನ್ನು ಜೊತೆಗೆ ಕೊಂಡೊಯ್ಯಬೇಕು. ತುಪ್ಪದ ಅಭಿಷೇಕ, ಪಂಪಾ ನದಿಯಲ್ಲಿ ಸ್ನಾನ ಹಾಗೂ ರಾತ್ರಿ ಉಳಿದುಕೊಳ್ಳುವುದು ಯಾವುದಕ್ಕೂ ಅವಕಾಶ ಇಲ್ಲ. ಎರುಮೆಲು ಮತ್ತು ವೇದಸಾರಿಕ್ಕರ ಎರಡು ಮಾರ್ಗದಲ್ಲಷ್ಟೆ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.