ಪ್ರಿ ವೆಡ್ಡಿಂಗ್ ಫೋಟೋ ಶೂಟ್ : ಜೋಡಿ ಸಾವು

10/11/2020

ಮೈಸೂರು ನ.10 : ಪ್ರಿ ವೆಡ್ಡಿಂಗ್ ಫೆÇೀಟೋಶೂಟ್ ಮಾಡಿಸಲು ಹೋದ ನವಜೋಡಿ ತೆಪ್ಪ ಮುಳಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ತಲಕಾಡಿನಲ್ಲಿ ನಡೆದಿದೆ.
ಮೈಸೂರಿನ ಕ್ಯಾತಮಾರನಹಳ್ಳಿ ನಿವಾಸಿಗಳಾಗಿದ್ದ ಚಂದ್ರು ಮತ್ತು ಶಶಿಕಲಾ ಮದುವೆ ನಿಶ್ಚಯವಾಗಿತ್ತು. ಅಂತೆಯೇ ನ.22ರಂದು ಮದುವೆ ಮಾಡಲು ಕುಟುಂಬಸ್ಥರು ತಯಾರಿ ಕೂಡ ನಡೆಸಿದ್ದರು. ಆದರೆ ಚಂದ್ರು ಮತ್ತು ಶಶಿಕಲಾ ಪ್ರಿ ವೆಡ್ಡಿಂಗ್ ಫೆÇೀಟೋಶೂಟ್ ಮಾಡಿಸಲು ಮನೆಯವರಿಗೆ ಹೇಳದೇ ಮೈಸೂರಿನ ತಲಕಾಡಿನ ಮುಡುಕುತೊರೆ ಗ್ರಾಮದಲ್ಲಿ ಹರಿಯುವ ಕಾವೇರಿ ನದಿಗೆ ಹೋಗಿದ್ದಾರೆ. ಮುಡುಕುತೊರೆಯ ಕಾವೇರಿ ನದಿಯಲ್ಲಿ ತೆಪ್ಪವನ್ನು ತೆಗೆದುಕೊಂಡು ಮಧ್ಯಭಾಗದಲ್ಲಿ ಫೆÇೀಟೋಶೂಟ್ ಮಾಡಿಸಲು ತೆರೆಳಿದ್ದಾರೆ. ಈ ವೇಳೆ ತೆಪ್ಪ ಮುಳುಗಿ ನವಜೋಡಿಗಳಿಬ್ಬರು ನೀರುಪಾಲಾಗಿದ್ದಾರೆ. ನಂತರ ಸ್ಥಳಕ್ಕೆ ಬಂದ ಪೆÇಲೀಸರು ಕಾರ್ಯಾಚರಣೆ ಮಾಡಿ ಇಬ್ಬರ ಶವಗಳನ್ನು ಹೊರಕ್ಕೆ ತೆಗೆದಿದ್ದಾರೆ. ಈ ಸಂಬಂಧ ತಲಕಾಡು ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ