ವಿರಾಜಪೇಟೆಯಲ್ಲಿ ಗೃಹರಕ್ಷಕ ದಳದಿಂದ ಕೋವಿಡ್ ಜನ ಜಾಗೃತಿ

November 10, 2020

ವಿರಾಜಪೇಟೆ, ನ. 9: ದೇಶದ ಎಲ್ಲೇಡೆ ಕೊರೋನಾ ಸೋಂಕಿನ ತೀವ್ರತೆಯನ್ನು ಶಮನ ಮಾಡಲು ಆರೋಗ್ಯ ಇಲಾಖೆಯ ನಿರ್ದೇಶನಗಳನ್ನು ಪಾಲಿಸುವಂತೆ ಗೃಹ ರಕ್ಷಕ ದಳ ಇಲಾಖೆ ವಿರಾಜಪೇಟೆ ಘಟಕದಿಂದ ಜನತೆಯಲ್ಲಿ ಜಾಗೃತಿ ಮೂಡಿಸಲಾಯಿತು.

ಗೃಹರಕ್ಷಕ ದಳ ವಿರಾಜಪೇಟೆ ಘಟಕದಿಂದ ಕೋವಿಡ್ ಸೋಂಕು ತಡೆಗಟ್ಟಲು ಜನ ಜಾಗೃತಿ ಆಂದೋಲನ ನಡೆಯಿತು.
ಜಾಗೃತಿ ಆಂದೋಲನದ ಅಂಗವಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಭಿತ್ತಿ ಪತ್ರಗಳನ್ನು ಹಂಚಲಾಯಿತು. ಜನತೆಯಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬ್ಯಾನರ್‍ಗಳನ್ನು ಅಳವಡಿಸಲಾಯಿತು. ಅಲ್ಲದೆ ಸೊಂಕು ತಡೆಗಟ್ಟುವ ಕಾರ್ಯವಿಧಾನಗಳ ಬಗ್ಗೆ ಜನ ಸಮಾನ್ಯರಲ್ಲಿ ಅರಿವು ಮೂಡಿಸಲಾಯಿತು.
ಜಾಗೃತಿ ಆಂದೋಲನವು ವಿರಾಜಪೇಟೆ ಗೃಹ ರಕ್ಷಕ ದಳ ಘಟಕಾಧಿಕಾರಿ ಹೆಚ್.ಸಿ.ತಿಮ್ಮು ಅವರ ನೇತೃತ್ವದಲ್ಲಿ ನಡೆಯಿತು.

error: Content is protected !!