ವಿರಾಜಪೇಟೆಯಲ್ಲಿ ಪ್ರೀಮಿಯರ್ ಕ್ರಿಕೆಟ್ ಲೀಗ್‍ನ 3ನೇ ಅವೃತ್ತಿಗೆ ಚಾಲನೆ

November 10, 2020

ವಿರಾಜಪೇಟೆ, ನ. 9: ವಿರಾಜಪೇಟೆ ಪ್ರೀಮಿಯರ್ ಕ್ರಿಕೆಟ್ ಲೀಗ್‍ನ 3ನೇ ಅವೃತ್ತಿಗೆ ಐಕಾನ್ ಆಟಗಾರರ ಬಿಡ್ಡಿಂಗ್ ಆಯ್ಕೆ ಮೂಲಕ ಚಾಲನೆ ನೀಡಲಾಯಿತು.

ನಗರದ ಯುತ್ ಫ್ರೆಂಡ್ಸ್ ಸಂಸ್ಥೆಯಿಂದ ಆಯೋಜಿಸಲಾದ ವಿರಾಜಪೇಟೆ ಪ್ರೀಮಿಯರ್ ಕ್ರಿಕೆಟ್ ಲೀಗ್‍ನ 3 ನೇ ಅವೃತ್ತಿಯ ತಂಡದ ಪ್ರಮುಖ ಆಟಗಾರರ ಬಿಡ್ಡಿಂಗ್ ಪ್ರಕ್ರಿಯೆ ನಗರದ ಹೊರವಲಯದಲ್ಲಿರುವ ಮೆಗ್ನೋಲಿಯ ರೆಸೋಟ್ರ್ಸನ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭ ಮೆಗ್ನೋಲಿಯ ರೆಸೋಟ್ರ್ಸ ನ ವ್ಯವಸ್ಥಾಪಕ ಪ್ರವೀಣ್ ಅರವಿಂದ್, ಆಯೋಜಕ ಅಭಿಶೇಕ್, ಶವಾಜ್, ಪ್ರೀಮಿಯರ್ ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸುತ್ತಿರುವ ಒಟ್ಟು 14 ತಂಡಗಳ ಮಾಲೀಕರು ಮತ್ತು ವ್ಯವಸ್ಥಾಪಕರು, ಪ್ರಮುಖ ಆಟಗಾರರು ಸೇರಿದಂತೆ ಪಂದ್ಯಾಟಗಳ ತಾಂತ್ರಿಕ ವಿಭಾಗದ ಪ್ರಮುಖರು ಹಾಜರಿದ್ದರು.

error: Content is protected !!