ಪ್ರೊ.ಎಂ.ಎಸ್.ಶೋಭಾ ಅವರಿಗೆ ಪಿಹೆಚ್‌ಡಿ ಪದವಿ

10/11/2020

ಮಡಿಕೇರಿ ನ.10 : ಮೈಸೂರಿನ ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ “ಸೂಕ್ಷ್ಮ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಂ.ಎಸ್.ಶೋಭಾ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಮೈಸೂರು ವಿಶ್ವವಿದ್ಯಾನಿಲಯದ ಶತಮಾನದ ಘಟಿಕೋತ್ಸವದಲ್ಲಿ “studies on endophytes against Phytophthora Capsici Leonian the incitant of foot rot of pepper” ಮಹಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪುರಸ್ಕಾರವಾಗಿದೆ.
ಇವರು ಮೈಸೂರಿನ ಯುವರಾಜ ಕಾಲೇಜಿನ ಸೂಕ್ಷ್ಮ ಜೀವಾಣು ಶಾಸ್ತ್ರ ವಿಭಾಗದ ಪ್ರೊ.ಡಾ.ಎಸ್.ಮಹಾದೇವಮೂರ್ತಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಪಿಹೆಚ್‌ಡಿ ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಿಂದ ಪಡೆದಿದ್ದಾರೆ.
ಎಂ.ಎಸ್.ಶೋಭಾ ಅವರು ಮಡಿಕೇರಿಯ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ ಅವರ ಪತ್ನಿ.