ಕಾನೂನು ವಿ.ವಿ. : ಕೋವಿಡ್ ನಂತರ ಇಂಟರ್‍ಮಿಡಿಯೆಟ್ ಸೆಮಿಸ್ಟರ್ ಪರೀಕ್ಷೆ

November 10, 2020

ಮಡಿಕೇರಿ ನ.10 : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಎಲ್ಲ ಕಾನೂನು ಮಹಾವಿದ್ಯಾಲಯಗಳಿಗೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲ್ಯಯ ಹುಬ್ಬಳ್ಳಿಯು ಈಗಾಗಲೇ ಇಂಟರ್ ಮಿಡಿಯೇಟ್ ಸೆಮಿಸ್ಟರ್ ಪರೀಕ್ಷೆಗಳನ್ನು ಹೊರತು ಪಡಿಸಿ ಅಂತಿಮ ವರ್ಷದ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಲು ಅಖಿಲ ಭಾರತ ವಕೀಲ ಮಂಡಳಿ ನಿರ್ಧರಿಸಿದೆ.
ಅದರ ಪ್ರಕಾರ ಎಲ್ಲಾ ಇಂಟರ್ ಮಿಡಿಯೇಟ್ ಸೆಮಿಸ್ಟರ್ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ನಡೆಸದೆ ಮುಂದಿನ ವರ್ಷಕ್ಕೆ ಪ್ರವೇಶ ಕಲ್ಪಿಸಲಾಗಿದೆ. ಮಹಾವಿದ್ಯಾಲಯಗಳು ಪುನರಾರಂಭಗೊಂಡು ಕೋವಿಡ್-19 ರ ಪರಿಸ್ಥಿತಿ ಸುಧಾರಿಸಿದ ನಂತರ ಈ ಪರೀಕ್ಷೆಗಳನ್ನು ನಡೆಸುವುದು ಅಖಿಲ ಭಾರತ ವಕೀಲ ಮಂಡಳಿಯ ನಿಯಮಾವಳಿಗಳಂತೆ ಕಡ್ಡಾಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೊಳಗಾಗದೆ ಪರೀಕ್ಷೆಗಳ ತಯಾರಿ ಮಾಡಿಕೊಳ್ಳುವತ್ತ ತಮ್ಮ ಗಮನಹರಿಸಲು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಡಾ. ಜಿ.ಬಿ.ಪಾಟೀಲ ಕೋರಿದ್ದಾರೆ.

error: Content is protected !!