ಕುಟ್ಟಪ್ಪ ಸ್ಮರಣಾರ್ಥ ವಿಶೇಷ ಪೂಜೆ

10/11/2020

ಮಡಿಕೇರಿ ನ.10 : ಐದು ವರ್ಷಗಳ ಹಿಂದೆ ಟಿಪ್ಪು ಜಯಂತಿಯ ಸಂದರ್ಭ ಮಡಿಕೇರಿಯಲ್ಲಿ ನಡೆದ ಗಲಭೆಯಲ್ಲಿ ಮೃತಪಟ್ಟ ದೇವಪಂಡ ಕುಟ್ಟಪ್ಪ ಅವರ ಸ್ಮರಣಾರ್ಥ ಹಿಂದೂ ಸಂಘಟನೆಗಳು ನಗರದ ಶ್ರೀಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದವು.
ಭಜರಂಗ ದಳದ ಚೇತನ್, ಸುಕುಮಾರ್, ಮಂಜು, ಎಬಿವಿಪಿಯ ವಿನಯ್, ವಿಶ್ವ ಹಿಂದೂ ಪರಿಷದ್‍ನ ಎನ್.ಡಿ ನರಸಿಂಹ, ಮಡಿಕೇರಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರಮೇಶ್ ಹೊಳ್ಳ, ಬಿಜೆಪಿ ಪ್ರಮುಖರಾದ ಕಾಂಗೀರ ಸತೀಶ್, ಉಮೇಶ್ ಸುಬ್ರಮಣಿ, ಬಿ.ಕೆ. ಅರುಣ್ ಕುಮಾರ್, ಪುದಿಯೊಕ್ಕಡ ರಮೇಶ್, ಹಿಂದೂ ಜಾಗರಣ ವೇದಿಕೆಯ ಕುಕ್ಕೇರ ಅಜಿತ್ ಮತ್ತಿತ್ತರರು ಈ ಸಂದರ್ಭ ಹಾಜರಿದ್ದರು.