ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯಲ್ಲಿ ಪೌಷ್ಠಿಕ ಆಹಾರ ಮೇಳ ಕಾರ್ಯಾಗಾರ

10/11/2020

ಸುಂಟಿಕೊಪ್ಪ ನ.10: ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗರಗಂದೂರು ಪ್ರಗತಿ ಬಂಧು ಹಾಗೂ ಸ್ವಸಹಾಯ ಸಂಘದ ಮಹಿಳಾ ಸದಸ್ಯರಿಗೆ ಮಂಜುಶ್ರೀ ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಮಹಿಳೆಯರಿಗೆ ಪೌಷ್ಠಿಕ ಆಹಾರ ಮೇಳ ಮಾಹಿತಿ ಕಾರ್ಯಾಗಾರವನ್ನು ನಡೆಸಲಾಯಿತು.
ಗರಗಂದೂರು ಮಲ್ಲಿಕಾರ್ಜುನ ಕಾಲೋನಿ ಸಮುದಾಯ ಭವನದಲ್ಲಿ ಆಯೋಜಿಸಲಾದ ಸಮಾರಂಭವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೋಮವಾರಪೇಟೆ ತಾಲೂಕಿನ ಯೋಜನಾಧಿಕಾರಿಗಳಾದ ಪ್ರಕಾಶ್ ವೈ ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಯುವ ಜನಾಂಗದಲ್ಲಿ ಆಧುನಿಕ ಶೈಲಿಯ ಆಹಾರ ಪದ್ಧತಿಯಿಂದ ಆಪೌಷ್ಠಿಕತೆಯಿಂದ ಹೆಚ್ಚಾಗಿ ಕಂಡು ಬರುತ್ತಿದೆ. ಯುವಜನಾಂಗವು ಹಿರಿಯರು ಬಳಕೆಗೊಳಿಸುತ್ತಿದ್ದ ಆಹಾರ ಪದ್ಧತಿಯನ್ನು ನಿಲ್ರ್ಯಕ್ಷಿಸಿ, ಆಧುಕನಿಕ ಬದುಕಿನ ಕಡೆಗೆ ಮಾರು ಹೋಗುತ್ತಿರುವ ಯುವ ಜನಾಂಗ ಆಧುನಿಕ ಆಹಾರ ಪದಾರ್ಥಗಳಿಗೆ ಒಲವು ತೋರುತ್ತಿದ್ದು, ಇದರಿಂದ ಆಪೌಷ್ಠಕತೆಯಿಂದ ವಿವಿಧ ರೋಗ ರುಜಿನ ಬಲಹಿನತೆಯು ಕಂಡು ಬರುತ್ತಿದೆ. ದ್ವಿದಳದಾನ್ಯ ಹಾಗೂ ಕಾಯಿ, ಸೋಪ್ಪು ಪಲ್ಯಗಳನ್ನು ನಿತ್ಯ ಆಹಾರ ಪದ್ಧತಿಯಲ್ಲಿ ಉಪಯೋಗಿಸುವ ಮೂಲಕ ಪೋಷಕರು ಹಾಗೂ ಮಕ್ಕಳ ದೇಹದ ಪೌಷ್ಠಿಕತೆಯನ್ನು ಕಾಪಾಡಬೇಕೆಂದು ಕಿವಿಮಾತು ಹೇಳಿದರು.
ಯೋಜನೆಯಲ್ಲಿ ಸಂಘದ ಸದಸ್ಯರಿಗೆ ದ್ಯೆಯೋದ್ಧೇಶ ಹಾಗೂ ಮಹಿಳೆಯರ ಸಬಲೀಕರಣಕ್ಕೆ ಅರ್ಥಿಕವಾಗಿ ಅಭಿವೃದ್ಧಿ ಹೊಂದಲು ಹತ್ತು ಹಲವು ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.
ಸ್ವಸಹಾಯ ಸಂಘದ ಮಂಜುಶ್ರೀ ಜ್ಞಾನ ವಿಕಾಸ ಪೌಷ್ಟಿಕ ಆಹಾರ ಮೇಳ ಸಮಾರಂಭದಲ್ಲಿ ಆರೋಗ್ಯ ಇಲಾಖೆಯ ಆರೋಗ್ಯ ಕಾರ್ಯಕರ್ತೆ ಬಿ.ಡಿ.ಗ್ರೀಷ್ಮ ಮಾತನಾಡಿ ಮನೆಯಲ್ಲಿ ತಯಾರಿಸಿ ಸೇವಿಸುವ ಆಹಾರ ಪದಾರ್ಥಗಳಲ್ಲಿ ಕಾಳುಗಳು, ಕಾಯಿ, ಸೊಪ್ಪುಗಳನ್ನು, ಹಾಲು,ಮೊಟ್ಟೆ,ವಿಟಮಿನ್ ಉಪಯುಕ್ತ ಪದಾರ್ಥಗಳನ್ನು ಸೇವಿಸುವುದರಿಂದ ಪೌಷ್ಠಿಕತೆ ಹೆಚ್ಚಾಗುತ್ತದೆ ರೋಗನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗುತ್ತದೆ ಇದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.
ಸಮಾರಂಭದ ವೇದಿಕೆಯಲ್ಲಿ ತಾಲೂಕಿನ ಸಮನ್ವಯ ಅಧಿಕಾರಿ ಪದ್ಮ, ಸುಂಟಿಕೊಪ್ಪ ವಲಯಾ ಮೇಲ್ವಿಚಾರಕಿ ಪುಷ್ಪಲತ, ಗರಗಂದೂರು ಪ್ರಗತಿ ಬಂಧು ಒಕ್ಕೂಟದ ಅಧ್ಯಕ್ಷೆ ಪುಷ, ನವ ಜೀವನ ಸಮಿತಿಯ ಸಂಯೋಜಕರಾದ ಮಂಜುನಾಥ, ರಮೇಶ್ ಸೇವಾಪ್ರತಿನಿಧಿ ಕುಸುಮ ಮತ್ತಿತರರು ಇದ್ದರು.
ಮಕ್ಕಳು ಮತ್ತು ಸಂಘದ ಸದಸ್ಯರಿಂದ ಸಾಂಸ್ಕøತಿಕ ಕಾರ್ಯಕ್ರಮವು ನೆರೆದಿದ್ದ ಜನತೆಯ ಮನತಣಿಸಿದ್ದವು.