ಸುಂಟಿಕೊಪ್ಪ ಹೋಬಳಿ ಪೌತಿ ಖಾತೆ ಆಂದೋಲನಕ್ಕೆ ಚಾಲನೆ

10/11/2020

ಸುಂಟಿಕೊಪ್ಪ ನ.10: ಸುಂಟಿಕೊಪ್ಪ ಹೋಬಳಿಯ ಕಂದಾಯ ಇಲಾಖೆಯ ಪೌತಿ ಖಾತೆ ಬದಲಾವಣೆ ಆಂದೋಲನದ ಪ್ರಥಮ ಸಭೆಯನ್ನು ಉಪತಹಶೀಲ್ದಾರ್ ಶುಭಾ .ಕೆ, ಕಂದಾಯ ಪರಿವೀಕ್ಷಕ ಶಿವಪ್ಪ ಅವರು ಚಾಲನೆ ನೀಡಿದರು.
ಕೊಡಗರಹಳ್ಳಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪೌತಿ ಖಾತೆ ಬದಲಾವಣೆ ಆಂದೋಲನ ಸಭೆಯನ್ನು ಕಂದಾಯ ಪರಿವೀಕ್ಷಕರಾದ ಶಿವಪ್ಪ ಮಾತನಾಡಿ ಸರಕಾರದ ಆದೇಶದಂತೆ ಸರಕಾರದ ಸವತ್ತುಗಳು ಹಲವು ಮಂದಿಗೆ ಇಂದಿಗೂ ಪೌತಿ ಖಾತೆಗೊಳ್ಳದೆ ಸವಲತ್ತುಗಳು ದೊರಕುತ್ತಿಲ್ಲ ಕೃಷಿಕರಿಗೆ ಪೌತಿ ಖಾತೆಯನ್ನು ಮನೆ ಮನೆಗೆ ತಲುಪಿಸುವ ಕೆಲಸ ಆಗಬೇಕು. ಇದರಿಂದ ಉಪತಹಶೀಲ್ದಾರರು, ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು ಹಾಗೂ ಗ್ರಾಮ ಸಹಾಯಕರು ಒಗ್ಗೂಡಿ ಕೃಷಿಕರ ಅರ್ಜಿಯನ್ನು ಸ್ವೀಕರಿಸಿ 1 ದಿನದಲ್ಲಿ ಈ ಕೆಲಸ ಮಾಡಿಕೊಡಲಾಗುವುದು ಪಲಾನುಭವಿಗಳು ಅರ್ಜಿಯೊಂದಿಗೆ ಕುಟುಂಬ ಸದಸ್ಯರುಗಳ ಮರಣ ದೃಢೀಕರಣ ಪತ್ರ, ಪಹಣಿ ಪತ್ರ, ವಂಶಾವಳಿ ಪಡಿತರ ಚೀಟಿ ಹಾಗೂ ಆಧಾರಕಾರ್ಡುಗಳನ್ನು ಲಗತ್ತಿಸಿ ಪ್ರಯೋಜನ ಪಡೆದುಕೊಳ್ಳ ಬಹುದು ಎಂದು ಹೇಳಿದರು.
ಉಪತಹಶೀಲ್ಧಾರ್ ಶುಭಾ .ಕೆ ಮಾತನಾಡಿ ಸರಕಾರದ ಯಾವುದೇ ಸವಲತ್ತುಗಳನ್ನು ಪಡೆದುಕೊಳ್ಳಬೇಕೆಂದರೆ ದಾಖಲಾತಿಗಳನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದರೆ ಮಾತ್ರ ಸಾಧ್ಯವಾಗಲಿದೆ. ಹಲವು ಕೃಷಿಜಮೀನು ಹೊಂದಿರುವ ಕೃಷಿಕರಿಗೆ ಜಮೀನು ತಮ್ಮ ಕುಟುಂಬದ ಹಿರಿಯರ ಹೆಸರಿನಲ್ಲಿಯೇ ಉಳಿದುಕೊಂಡಿದ್ದು ಅವರ ಮರಣ ಧೃಡೀಕರಣ ಪತ್ರ ಹಾಗೂ ಇನ್ನಿತರ ದಾಖಲಾತಿಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಸರಕಾರ ನೀಡಿರುವ ಈ ಆದೇಶವನ್ನು ನೀಡಿದೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಇದ್ದರು.

ಹಾದ್ರೆ ಹೆರೂರು,ನಾಕೂರು,ಹೆರೂರು,ಕಾನ್‍ಬೈಲ್, ಬೈಚನಹಳ್ಳಿ, ಅಂದಗೋವೆ ಈ ವಿಭಾಗದ ಪಲಾನುಭವಿಗಳು ಈ ಆಂದೋಲನದಲ್ಲಿ ಭಾಗವಹಿಸಿ ಪೌತಿ ಖಾತೆ ಬದಲಾವಣೆಗೆ ಅರ್ಜಿ ನೀಡಿದರು.
ಈ ಸಂದರ್ಭದಲ್ಲಿ ಕೊಡಗರಹಳ್ಳಿ ಗ್ರಾ.ಪಂ.ಪಿಡಿಓ ಗಿರೀಶ್, ಗ್ರಾಮಲೆಕ್ಕಿಗರಾದ ರೂಪಶ್ರೀ,ಟಿ.ಎಂ.ನಸ್ಸಿಮಾ,ನಾಗೇಂದ್ರ,ಡಾಪ್ನ ಡಿ.ಕೋಸ್, ಚಂದನ,ಆಶಾ,ದೀಪಿಕಾ ಹಾಗೂ ಗ್ರಾಮ ಸಹಾಯಕರಾದ ಶಿವಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.