ರಶ್ಮಿಕಾ ಮಂದಣ್ಣ ಈಗ URLife ವೆಬ್ ಸಂಪಾದಕಿ

11/11/2020

ಬೆಂಗಳೂರು ನ.11 : ರಾಮ್‍ಚರಣ್ ಪತ್ನಿ ಉಪಾಸನಾ ಕಮಿಸೇನಿ ಕೋನಿಡೇಲಾ ಅವರು URLife ವೆಬ್ ಮತ್ತು ಸೋಷಿಯಲ್ ಮೀಡಿಯಾವನ್ನು ಪ್ರಾರಂಭಿಸಿದ್ದು ಫಿಟ್‍ನೆಸ್, ಹೆಲ್ತ್ ಟಿಪ್ಸ್, ಆರೋಗ್ಯಕರ, ಪೆÇ್ರೀಟೀನ್ ಭರಿತ ಆಹಾರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅವರು ಈ ಜಾಲತಾಣ ಆರಂಭಿಸಿದ್ದಾರೆ.
ಇದರ ಮ್ಯಾನೇಜಿಂಗ್ ಡೈರೆಕ್ಟರ್ ಹುದ್ದೆ ಅವರು ವಹಿಸಿಕೊಂಡಿದ್ದರೆ ಅತಿಥಿ ಸಂಪಾದಕಿಯನ್ನಾಗಿ ಕೊಡಗಿನ ಕುವರಿ, ಕಿರಿಕ್ ಪಾರ್ಟಿ ಖ್ಯಾತಿಯ ರಶ್ಮಿಕಾ ಮಂದಣ್ಣ ಅವರನ್ನು ನೇಮಕ ಮಾಡಿದ್ದಾರೆ. ಜೀವನ ಶೈಲಿಯ ಬಗ್ಗೆ ಹೆಚ್ಚು ಅರಿವು ಮೂಡಿಸುವ ಸಲುವಾಗಿ ಆರೋಗ್ಯಕರ ಆಹಾರ ಸಲಹೆಗಳು ಮತ್ತು ಪಾಕ ವಿಧಾನಗಳನ್ನು ಪರಿಚಯಿಸುವುದಕ್ಕಾಗಿ ರಶ್ಮಿಕಾ ನಾನಾ ಯೋಜನೆ ಹಾಕಿಕೊಂಡಿದ್ದಾರೆ.