ಸಮಸ್ಯೆ ಮುಕ್ತಿಗೆ ಪ್ರವಾದಿ ಸಂದೇಶ ವೆಬಿನಾರ್ ಕಾರ್ಯಕ್ರಮ”

11/11/2020

ಮಡಿಕೇರಿ:ಪ್ರವಾದಿ ಮೊಹಮ್ಮದ್ ಪೈಗಂಬರ್ (ಸ) ರವರ ಜನ್ಮದಿನ ಅಂಗವಾಗಿ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯು.ಎ.ಇ ಸಮಿತಿ ವತಿಯಿಂದ “ಸಮಸ್ಯೆ ಮುಕ್ತಿಗೆ ಪ್ರವಾದಿ ಸಂದೇಶ” ಎಂಬ ಶೀರ್ಷಿಕೆಯಲ್ಲಿ ವೆಬಿನಾರ್ ಕಾರ್ಯಕ್ರಮ ನಡೆಯಿತು.

ಮೀಲಾದ್ ಸ್ವಾಗತ ಸಮಿತಿ ಅಧ್ಯಕ್ಷರಾದ ಯೂಸುಫ್ ಟಿ.ಎ ಬೆಳ್ಳುಮಾಡು ಅಧ್ಯಕ್ಷತೆಯನ್ನು ವಹಿಸಿದ್ದರು.
ಕೊಡಗು ಜಿಲ್ಲಾ ನಾಯಿಬ್ ಖಾಝಿ ಶೈಖುನಾ ಮಹ್ಮೂದ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೆ.ಸಿ.ಎಫ್ ಯ.ಎ.ಇ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಎಮ್ಮೆಮಾಡು, ಕೊಡಗು ಸುನ್ನಿ ವೆಲ್ಫೇರ್ ಯು.ಎ.ಇ ಅಧ್ಯಕ್ಷರಾದ ಅಬೂಬಕರ್ ಹಾಜಿ ಕೊಟ್ಟಮುಡಿ,ಉಸ್ಮಾನ್ ಹಾಜಿ ನಾಪೋಕ್ಲು, ಅಲಿ‌ ಮುಸ್ಲಿಯಾರ್ ಬಹರೈನ್ ಅಧ್ಯಕ್ಷರು ಕೆ.ಎಸ್.ಡಬ್ಲ್ಯೂ .ಎ ಜಿಸಿಸಿ ಸೇರಿದಂತೆ ಹಲವಾರು ನಾಯಕರು ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೌಲಿದ್ ಎಲ್ಲರ ಗಮನ ಸೆಳೆಯಿತು.

ಜಿಲ್ಲಾ ಪಂಚಾಯತ್ ಸದಸ್ಯರಾದ ಲತೀಫ್ ಸುಂಟಿಕೊಪ್ಪ, ಆಬಿದ್ ಕಂಡಕರೆ, ಮಜೀದ್ ಮೂರ್ನಾಡು, ಇಸ್ಮಾಯಿಲ್ ಕೊಂಡಂಗೇರಿ,ರಫೀಕ್ , ಹಮೀದ್ ಚಾಮಿಯಾಲ್, ಅರಫಾತ್ ನಾಪೋಕ್ಲು, ಹಂಸ ಹಾಜಿ ಪೊನ್ನಂಪೇಟೆ,ಮಹಮ್ಮದ್ ಹಾಜಿ ಕೊಂಡಂಗೇರಿ, ಆಲಿ ಎಮ್ಮೆಮಾಡು, ಮುಜಮ್ಮಿಲ್ ಪಾಲಿಪೆಟ್ಟ, ಅಹ್ಮದ್ ಚಾಮಿಯಾಲ್, ಹಂಸ ಎಮ್ಮೆಮಾಡು ಭಾಗವಹಿಸಿದ್ದರು.

ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಯ.ಎ.ಇ ಇದರ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮೂರ್ನಾಡು ಸ್ವಾಗತಿಸಿ ,ಮುಜೀಬ್ ಕಡಂಗ ವಂದಿಸಿದರು.ರಿಯಾಜ್ ಕೊಂಡಂಗೇರಿ ಕಾರ್ಯಕ್ರಮವನ್ನು ನಿರೂಪಿಸಿದರು.