ಚಿಕನ್ 65 ಮಾಡುವ ವಿಧಾನ

ಬೇಕಾಗುವ ಸಾಮಾಗ್ರಿಗಳು : ಚಿಕನ್ – 450 ಗ್ರಾಂ, ಕೊತ್ತಂಬರಿ ಪುಡಿ – 3 ಚಮಚ, ಮೊಸರು – 3 ಚಮಚ, ಹಸಿ ಮೆಣಸಿನ ಕಾಯಿ – 4, ಅಡುಗೆ ಎಣ್ಣೆ – 2 ಚಮಚ, ಕೆಂಪು ಮೆಣಸಿನ ಪುಡಿ – 1 ಚಮಚ, ಅರಿಶಿಣ ಪುಡಿ – 1/2 ಚಮಚ, 8 ಕರಿಬೇವಿನ ಎಲೆಗಳು – 6, ಟೊಮೆಟೋ – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಮೊಟ್ಟೆ – 1, ಈರುಳ್ಳಿ- 2, ಕಾನ್ ಫ್ಲೋರ್ ಹಿಟ್ಟು
ಮಾಡುವ ವಿಧಾನ: ಮೊದಲು 450 ಗ್ರಾಂ ಚಿಕನ್ಗೆ ಕಾನ್ ಫ್ಲೋರ್ ಹಿಟ್ಟನ್ನು ಹಾಕಿ ಮಿಕ್ಸ್ ಮಾಡಿಕೊಂಡು ಕಾದ ಎಣ್ಣೆಯಲ್ಲಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.
ಬಳಿಕ ಒಂದು ಪ್ಯಾನ್ಗೆ ಎಣ್ಣೆ ಹಾಕಿ ಕಡಿಮೆ ಉರಿಯಲ್ಲಿ ಹಸಿ ಮೆಣಸಿನ ಕಾಯಿ, ಟೊಮೆಟೋ, ಚಿಕ್ಕದಾಗಿ ಕಟ್ ಮಾಡಿಕೊಂಡ ಈರುಳ್ಳಿ, ಕೆಂಪು ಮೆಣಸಿನ ಪುಡಿ, ಅರಿಶಿಣ ಪುಡಿ, ರುಚಿಗೆ ಉಪ್ಪು, ಕರಿಬೇವಿನ ಎಲೆ ಹಾಕಿ ಫ್ರೈ ಮಾಡಿಕೊಳ್ಳಿ.
ಬಳಿಕ ಫ್ರೈ ಮಾಡಿಕೊಂಡ ಎಲ್ಲ ಐಟಮ್ಗೆ ಈಗಾಗಲೇ ಫ್ರೈ ಮಾಡಿದ್ದ ಚಿಕನ್ ಹಾಕಿ. ನಂತರ ಅದಕ್ಕೆ ಮೊಸರು ಹಾಕಿ 3 ನಿಮಿಷ ಮತ್ತೆ ಫ್ರೈ ಮಾಡಿಕೊಳ್ಳಿ.
3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಮೊಟ್ಟೆ ಹಾಕಿ ಮತ್ತೆ 5 ನಿಮಿಷಗಳ ಕಾಲ ಫ್ರೈ ಮಾಡಿದರೆ ಚಿಕನ್ 65 ಸವಿಯಲು ರೆಡಿ.
