ಮಡಿಕೇರಿಯ ಬದ್ರಿಯಾ ಜಮಾಅತ್ ಅಧ್ಯಕ್ಷರಾಗಿ ಅಮೀನ್ ಮೊಹಿಸಿನ್ ಆಯ್ಕೆ

12/11/2020

ಮಡಿಕೇರಿ ನ. 12 : ಮಡಿಕೇರಿಯ ಗಣಪತಿ ಬೀದಿಯಲ್ಲಿರುವ ಬದ್ರಿಯಾ ಜಮಾಅತ್ ನ ನೂತನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಅಮೀನ್ ಮೊಹಿಸಿನ್ ಆಯ್ಕಯಾಗಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿ ಎಂ. ಉಮ್ಮರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೂತನ ಸಮಿತಿಯ ಉಪಾಧ್ಯಕ್ಷ ತಮ್ಲಿಕ್ ಧಾರಿಮಿ, ಕಾರ್ಯದರ್ಶಿ ಎಂ. ಉಮ್ಮರ್, ಉಪಕಾರ್ಯದರ್ಶಿ ಉಮ್ಮರ್ ಬಿನ್ ಇಸ್ಮಾಯಿಲ್, ಕೋಶಾಧಿಕಾರಿ ಎಂ.ವೈ ರಿಯಾಜ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಬೀದ್ ಕಲಂದರ್, ಎಂ.ಎಂ ಇಸ್ಮಾಯಿಲ್, ಎಂ.ಹೆಚ್ ಮೊಹಮ್ಮದ್ ರಫೀಕ್, ಎಂ.ಎಂ ಅಬೂಹುರೈರಾ, ಎಂ.ಎಂ ಯಾಕೂಬ್ ಮತ್ತು ಎಂ.ಕೆ ಮನ್ಸೂರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.