Advertisement
ಜಾಹೀರಾತು *** ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ, ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು – ನಿಮ್ಮ ಸಮಸ್ಯೆ ಯಾವುದೇ ಇರಲಿ ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ನೀಡುತ್ತೇವೆ. ಇಂದೇ ಕರೆ ಮಾಡಿ ಪಂಡಿತ ಶ್ರೀಗೋಪಾಲ ಕೃಷ್ಣ ಭಟ್, ಶ್ರೀಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ – 95354 02066. ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ಶತ್ರು ಕಾಟ, ಮಾಟ, ಮಂತ್ರ ನಿವಾರಣೆ ಮನೇಲಿ ಕಿರಿಕಿರಿ, ಅತ್ತೆ, ಸೊಸೆ ಜಗಳ, ಸಂತಾನ ಪ್ರಾಪ್ತಿ, ಬಿಸಿನೆಸ್ ಪ್ರಾಬ್ಲಮ್, ಡ್ರೈವರ್ಸ್ ಪ್ರಾಬ್ಲಮ್, ಪ್ರೀತಿ-ಪ್ರೇಮ ವಿಚಾರಗಳಿಗೆ ಶೀಘ್ರ ಪರಿಹಾರ ನೀಡಲಾಗುವುದು. ಇಂದೇ ಕರೆ ಮಾಡಿ ನಿಮ್ಮ ಸರ್ವ ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಿ. ದೂರದ ಊರಿನವರಿಗೆ ಫೋನ್ ಕರೆ ಅಥವಾ ವ್ಯಾಟ್ಸ್ ಪ್ ಮೂಲಕ ಪರಿಹಾರ ತಿಳಿಸಲಾಗುವುದು. ಇಂದೇ ಸಂಪರ್ಕಿಸಿ : ಪಂಡಿತ ಶ್ರೀಗೋಪಾಲಕೃಷ್ಣ ಭಟ್, (95354 02066) 1 ನೇ ಮಹಡಿ ಆರ್.ವಿ.ಭದ್ರಯ್ಯ ಸ್ಟೋರ್ ಎದುರು, ಬಾಷ್ಯಂ ಸರ್ಕಲ್, ರಾಜಾಜಿನಗರ, ಬೆಂಗಳೂರು.
10:51 PM Tuesday 26-October 2021

ಬಿಸಿಲ ನಾಡು ಕೊಪ್ಪಳ ಜಿಲ್ಲೆಯಲ್ಲೊಂದು ರಮಣೀಯ ತಾಣ

12/11/2020

ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಕಬ್ಬರಗಿ ಪ್ರದೇಶದಲ್ಲಿರುವ ಕಪಿಲತೀರ್ಥ ಜಲಪಾತ ಜಿಲ್ಲೆಯ ಏಕೈಕ ಫಾಲ್ಸ್.

ಮಳೆಯಾಶ್ರಿತ ಜಲಪಾತ ಇದಾಗಿದ್ದು, ದೊಡ್ಡಮಳೆಯಾಗಿ ಬೆಟ್ಟದಲ್ಲಿ ಸೆಲೆ ಉಂಟಾಗಿ ಚಿಕ್ಕ ತೊರೆ ಮೂಲಕ ನೀರು ಸಾಗಿ ಬಂದು ಸುಮಾರು 20ಅಡಿ ಮೇಲಿನಿಂದ ಕೊಳಕ್ಕೆ ಧುಮ್ಮಿಕ್ಕುತ್ತದೆ. ಜಲಪಾತಕ್ಕೆ ಹೊಂದಿಕೊಂಡೇ ಶಿವಲಿಂಗವಿದೆ. ಇದನ್ನು ಹಿಂದೆ ಕಪಿಲಮುನಿ ಎಂಬ ತಪಸ್ವಿ ಸ್ಥಾಪಿಸಿದ್ದರು. ಅವರು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದರು ಎಂಬ ಪ್ರತೀತಿಯಿದೆ. ಕಪಿಲಮುನಿ ಹೆಸರೇ ಜಲಪಾತಕ್ಕೆ ಬಂದಿದ್ದು ’ಕಪಿಲತೀರ್ಥ’ ಎಂದು ಕರೆಯಲಾಗುತ್ತದೆ. ಪ್ರವಾಸಿ ತಾಣವಾಗಿ ಈ ಸ್ಥಳ ಅಭಿವೃದ್ಧಿಯಾಗಿಲ್ಲ. ಹೊರಗಿನಿಂದ ಬರುವವರಿಗೆ ವಸತಿ, ಉಪಹಾರ ಸೇರಿ ಯಾವುದೇ ವ್ಯವಸ್ಥೆ ಇಲ್ಲ. ಇಲ್ಲಿಗೆ ಬರುವವರು ತಾವೇ ಆಹಾರದ ವ್ಯವಸ್ಥೆ ಮಾಡಿಕೊಳ್ಳಬೇಕು.

ಜಿಲ್ಲಾ ಕೇಂದ್ರ ಕೊಪ್ಪಳದಿಂದ 76 ಕಿ. ಮೀ. ಅಂತರದಲ್ಲಿದೆ. ಕೊಪ್ಪಳದಿಂದ ಕುಷ್ಟಗಿ, ಹನುಮಸಾಗರ ಮೂಲಕ ಜಲಪಾತ ಇರುವ ಕಬ್ಬರಗಿ ಗ್ರಾಮ ತಲುಪಬಹುದು. ಹನುಮಸಾಗರವರೆಗೆ ಸಾರಿಗೆ ಬಸ್ಸಿನ ವ್ಯವಸ್ಥೆ ಇದೆ. ಕಬ್ಬರಗಿಗೆ ಖಾಸಗಿ ವಾಹನಗಳಲ್ಲಿ ತೆರಳಬೇಕು. ಗ್ರಾಮದಿಂದ ಪಶ್ಚಿಮಭಾಗದಲ್ಲಿನ ಬೆಟ್ಟದ ಮಧ್ಯೆ ಜಲಪಾತ ಇದೆ. ಕಬ್ಬರಗಿಯಿಂದ 3 ಕಿ.ಮೀ. ನಡೆದು ಹೋಗಬೇಕು.