ಬಸವನಹಳ್ಳಿಯಲ್ಲಿ ಕಾಡಾನೆ ದಾಳಿ : ಯುವ ಕಾಂಗ್ರೆಸ್‌ನಿಂದ ಕಿಟ್ ವಿತರಣೆ

12/11/2020

ಮಡಿಕೇರಿ ನ. 12 : ಕಾಡಾನೆ ದಾಳಿಯಿಂದ ಮನೆ ಹಾನಿಯಾಗಿ ಅಗತ್ಯ ವಸ್ತುಗಳನ್ನ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕುಟುಂಬಕ್ಕೆ
ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸಮೀರ್ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಮೀರ್, ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟ ಸಮೀಪ ಚೆನ್ನಂಗಿ ಬಸವನಹಳ್ಳಿ ಹಾಡಿ ನಿವಾಸಿ ಭೋಜ ಎಂಬವರ ಮನೆಯೊಳಗೆ ಕಾಡಾನೆಯೊಂದು ನುಗ್ಗಿ ಹಾನಿ ಪಡಿಸಿದ್ದಲ್ಲದೆ ಆಹಾರ ಪದಾರ್ಥಗಳನ್ನು ತಿಂದು ಮನೆಯಲ್ಲಿದ್ದ ವಸ್ತುಗಳನ್ನು ತುಳಿದು ನಾಶ ಮಾಡಿದೆ.
ಐದು ದಿನಗಳು ಕಳೆದರು ಗ್ರಾ.ಪಂ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದೆ ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ನಿರಂತರಕಾಡು ಪ್ರಾಣಿಗಳ ಭಯದ ನಡುವೆ ಬದುಕು ಸಾಗಿಸುತ್ತಿರುವ ಹಾಡಿಯಲ್ಲಿ ಮೂಲ ಸೌಕರ್ಯದಿಂದ ವಂಚಿತವಾಗಿ ಅಭಿವೃದ್ಧಿಪಡಿಸುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು ಹಾಡಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಮನೆಗಳು ಅತ್ಯಂತ ಕಳಪೆಯಿಂದ ಕೂಡಿದ್ದು ತನಿಖೆ ಮಾಡುವ ಮೂಲಕ ಹಾಡಿಗೆ ಮೂಲ ಸೌಕರ್ಯಕಲ್ಪಿಸಬೇಕೆಂದು ಒತ್ತಾಯಿಸಿದರು.
ಯುವ ಕಾಂಗ್ರೆಸ್ ಕಾರ್ಯಕರ್ತರಾದ ರಫೀಕ್, ಮನ್ಸೂರ್, ಸಂಶೀರ್, ಸಿನಾನ್, ಮುಜಾಮಿಲ್ , ರಿμÁದ್, ನೌಫಲ್ ಹಾಡಿಯ ನಿವಾಸಿಗಳಾದ ಮಹೇಶ್, ದರ್ಶನ್ ,ಸಿದ್ದು, ಸುಜಿ, ಮಂಜುಳಾ, ನೇತ್ರ ,ದಿವ್ಯಾ, ಲಕ್ಷ್ಮಿ, ತಂಗಮ್ಮ, ಗಣೇಶ ಸೇರಿದಂತೆ ಮತ್ತಿತರರು ಹಾಜರಿದ್ದರು .