ಮಡಿಕೇರಿಯಲ್ಲಿ ನ. 14 ಹಾಗೂ 15 ರಂದು ಕ್ಯಾಲಿಗ್ರಫಿ ಮತ್ತು ಕೈಬರಹ ಕಲಾ ಪ್ರದರ್ಶನ

12/11/2020

ಮಡಿಕೇರಿ ನ. 12 : ಮಡಿಕೇರಿಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ನ. 14 ರಂದು ಜ್ಯೋತಿ ಕ್ಯಾಲಿಗ್ರಫಿ ಕೇಂದ್ರದಿಂದ ಕ್ಯಾಲಿಗ್ರಫಿ ಮತ್ತು ಕೈಬರಹಗಳ ಅಪೂರ್ವ ಕಲಾ ಪ್ರದರ್ಶನ ಆಯೋಜಿಸಲಾಗಿದೆ.

ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನ. 14 ಮತ್ತು 15 ರಂದು ಪ್ರದರ್ಶನ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಿರುತ್ತದೆ.

ಮಕ್ಕಳು ತಯಾರಿಸಿದ ಕ್ಯಾಲಿಗ್ರಫಿ ಮತ್ತು ಕೈಬರಹ ಕಲಾ ಪ್ರದರ್ಶನ ಮಾತ್ರ ಇರುತ್ತದೆ. ಮಕ್ಕಳ ಭಾಗವಹಿಸುವಿಕೆ ಇರುವುದಿಲ್ಲ.

ಕ್ಯಾಲಿಗ್ರಫಿಗೆ ಉಪಯೋಗಿಸುವ ವಿವಿಧ ರೀತಿಯ ಪೆನ್ನುಗಳು, ಬ್ರಶ್ಶುಗಳು ಮತ್ತು ಶಾಯಿಯ ಪ್ರದರ್ಶನ ಕೂಡ ಇರುತ್ತದೆ.

ಪ್ರದರ್ಶನವನ್ನು ವೀಕ್ಷಿಸಲು ಬರುವವರು ಮಾಸ್ಕನ್ನು ಖಡ್ಡಾಯವಾಗಿ ಧರಿಸಲೇಬೇಕು.ಸಭಾಂಗಣದ ಒಳಬರುವ ಮುನ್ನ ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳ ಬೇಕೆಂದು ಜ್ಯೋತಿ ಕ್ಯಾಲಿಗ್ರಫಿ ಕೇಂದ್ರದ ಮುಖ್ಯಸ್ಥೆ ನಮಿತಾ ರಾವ್ ತಿಳಿಸಿದ್ದಾರೆ.