ಕಲ್ಕಂದೂರು ಗ್ರಾಮದಲ್ಲಿ ಕಳ್ಳಭಟ್ಟಿ ದಂಧೆ : ಓರ್ವನ ಬಂಧನ

November 12, 2020

ಸೋಮವಾರಪೇಟೆ ನ.12 : ಕಲ್ಕಂದೂರು ಗ್ರಾಮದಲ್ಲಿ ಕಳ್ಳಭಟ್ಟಿ ತಯಾರಿಸಲು ಸಿದ್ಧಪಡಿಸಿಕೊಂಡಿದ್ದ 30 ಲೀಟರ್ ಬೆಲ್ಲದ ಪುಳಗಂಜಿಯನ್ನು ಅಬಕಾರಿ ಇಲಾಖೆಯವರು ದಾಳಿ ನಡೆಸಿ ವಶಕ್ಕೆ ಪಡೆದು ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ.
ಗ್ರಾಮದ ಕೆ.ಇ. ಪ್ರಸನ್ನ ಬಂಧಿತ ಆರೋಪಿ. ಕಾರ್ಯಾಚರಣೆಯಲ್ಲಿ ಅಬಕಾರಿ ಉಪನಿರೀಕ್ಷಕರಾದ ಎ. ಮಂಜು, ಸಿಬ್ಬಂದಿಗಳಾದ ಮಹಾದೇವ ಗಡ್ಡಿ, ಕೆ.ವಿ. ಸುಮತಿ ಮತ್ತಿತರರು ಪಾಲ್ಗೊಂಡಿದ್ದರು.
12ಎಸ್‍ಪಿಟಿ5: ಸೋಮವಾರಪೇಟೆ ಸಮೀಪದ ಕಲ್ಕಂದೂರು ಗ್ರಾಮದಲ್ಲಿ ಅಬಕಾರಿ ಇಲಾಖೆಯವರು ವಶಪಡಿಸಿಕೊಂಡ ಪುಳಗಂಜಿಯನ್ನು ನಾಶಪಡಿಸಿದರು. ಅಬಕಾರಿ ಉಪನಿರೀಕ್ಷಕರಾದ ಎ. ಮಂಜು ಇದ್ದರು.

error: Content is protected !!