ಅರುವತ್ತೊಕ್ಕಲು ಗ್ರಾಮದಲ್ಲಿ ಪೌತಿ ಖಾತೆ ಆಂದೋಲನ

12/11/2020

ಗೋಣಿಕೊಪ್ಪಲು ನ 12.  ರಾಜ್ಯ ಸರಕಾರದ ಆದೇಶದಂತೆ ಪೌತಿ ಖಾತೆ ಆಂದೋಲನವನ್ನು ಪೊನ್ನಂಪೇಟೆ ಹೋಬಳಿಯ ಅರುವತ್ತೊಕ್ಕಲು ಗ್ರಾಮದ ಪಂಚಾಯಿತಿ ಸಭಾಂಗಣದಲ್ಲಿ  ಪೊನ್ನಂಪೇಟೆ ಹೋಬಳಿಯ ಪ್ರಭಾರ ಕಂದಾಯ ನಿರೀಕ್ಷಕ ಎಸ್ ಎನ್ ಮಂಜುನಾಥ್ ರವರ ನೇತೃತ್ವದಲ್ಲಿ ಪ್ರಾರಂಭಿಸಲಾಯಿತು. ಕಾಫಿ ಬೆಳಗಾರರಾದ ಕಾಡ್ಯಮಾಡ ಪ್ರೀತ್ ರವರು ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು ಹಲವಾರು ವರ್ಷಗಳ ಸಮಸ್ಯೆಗೆ ಪರಿಹಾರ ದೊರಕಲಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಹಕಾರಿಯಾಗಿ ಕೆಲಸ ಮಾಡಬೇಕು ಎಂದರು. ಪೌತಿ ಖಾತೆ ವರ್ಗಾವಣೆ ನಿರಂತರ ಪ್ರಕ್ರಿಯೆ ಆದರೆ ಈ ಆಂದೋಲನದಿಂದ ಸಾರ್ವಜನಿಕರಿಗೆ ಸುಲಭವಾಗಿ ಖಾತೆ ವರ್ಗಾವಣೆ ಆಗಲಿದ್ದು ಇದೊಂದು ಜನಸ್ನೇಹಿ ಕಾರ್ಯಕ್ರಮವಾಗಿದೆ ಎಂದು ಕಂದಾಯ ನಿರೀಕ್ಷಕ ಎಸ್ ಎನ್ ಮಂಜುನಾಥ್ ಅಭಿಪ್ರಾಯಪಟ್ಟರು.ಅರುವತ್ತೊಕ್ಕಲು ಗ್ರಾಮ ಪಂಚಾಯತಿ ಸದಸ್ಯ ಪ್ರಾಣ್ ಬೋಪಣ್ಣ, ಗೋಣಿಕೊಪ್ಪಲು ಗ್ರಾಮ ಪಂಚಾಯತಿ ಮಾಜಿ ಸದಸ್ಯರಾದ ಅಬ್ದುಲ್ ಜಲೀಲ್, ಸರೋಜ, ಕೇಶವ ಕಾಮತ್,ಕಂದಾಯ ಇಲಾಖೆಯ ಯಶವಂತ್, ಸುನೀಲ್, ಸರೋಜ, ಪೂವಯ್ಯ ಉಪಸ್ಥಿತರಿದ್ದರು. ಅಲ್ಲದೆ ಪೊನ್ನಂಪೇಟೆ ಹೋಬಳಿಯ ಕುಂದ ಈಚೂರು, ದೇವರಪುರ ಮತ್ತು  ಕಿರುಗೂರು ಗ್ರಾಮ ಪಂಚಾಯಿತಿಗಳಲ್ಲಿ ಆಂದೋಲನ ನಡೆದಿದ್ದು ಮೊದಲ ದಿನ ಅರುವತ್ತು ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದ್ದಾರೆ ಎಂದು ಕಂದಾಯ ನಿರೀಕ್ಷಕ ಮಂಜುನಾಥ್ ಪತ್ರಿಕೆಗೆ ತಿಳಿಸಿದ್ದಾರೆ.