ಶ್ರೀಈಶ್ವರ ಭಗವತಿ ದೇವಾಲಯಕ್ಕೆ ಚಿನ್ನಾಭರಣ ಅರ್ಪಿಸಿದ ಕೋಡಿ ಪ್ರಕಾಶ್

13/11/2020

ಮಡಿಕೇರಿ ನ.13 : ಶ್ರೀತಲಕಾವೇರಿ ದೇವಾಲಯದ ದೇವತಕ್ಕ ಕುಟುಂಬಸ್ಥರಾದ ಬೆಂಗಳೂರಿನಲ್ಲಿ ನೆಲೆಸಿರುವ ಹೊಟೇಲ್ ಉದ್ಯಮಿ ಕೋಡಿ ಪ್ರಕಾಶ್ ಹಾಗೂ ಪತ್ನಿ ಜಯಂತಿ ಅವರು ಭಾಗಮಂಡಲದ ಚೇರಂಗಾಲ ಗ್ರಾಮದ ಶ್ರೀಈಶ್ವರ ಭಗವತಿ ದೇವಾಲಯಕ್ಕೆ ಬೆಳ್ಳಿಯ ಮುಖವಾಡ, ಬೆಳ್ಳಿಯ ಶಿವಲಿಂಗದ ಮುಖವಾಡ, ದೇವಿಗೆ ಚಿನ್ನದ ತಾಳಿಸರ, ಒಂದು ಜೊತೆ ಚಿನ್ನದ ಓಲೆ ಮತ್ತು ಚಿನ್ನದ ಮೂಗುತ್ತಿಯನ್ನು ಅರ್ಪಿಸಿದರು.
ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕುಟುಂಬಸ್ಥರು ನಂತರ ಶ್ರೀಈಶ್ವರ, ಭಗವತಿ ಹಾಗೂ ಶಿವಲಿಂಗದ ಬೆಳ್ಳಿಯ ಮುಖವಾಡವನ್ನು ಶ್ರೀಈಶ್ವರ ಭಗವತಿ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯದರು.
ದೇವಾಲಯದ ತಕ್ಕ ಮುಖ್ಯಸ್ಥರಾದ ಶಿರಕಜೆ ಸುಂದರ, ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ಜೋಯಪ್ಪ, ಕಾರ್ಯದರ್ಶಿ ಮತ್ತಾರಿ ಎಂ.ರಾಜ, ದೇವಾಲಯದ ನಿರ್ದೇಶಕರಾದ ಹೊಸೂರು ಅಪ್ಪಾಜಿ, ಪರಿವಾರ ತಿಮ್ಮಯ್ಯ, ಕೂಡಕಂಡಿ ದಿನೇಶ, ಮೂಲೆಮಜಲು ಪ್ರಕಾಶ್, ಕೋಡಿ ಭೀಮಯ್ಯ, ಮೂಲೆಮಜಲು ಗಣೇಶ್, ಪೆರುಬಾಯಿ ಗಣಪತಿ, ಕುಂಬನ ರವೀಂದ್ರ, ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೋಡಿ ಕುಟುಂಬಸ್ಥರಾದ ಕೋಡಿ ಬಾಲಕೃಷ್ಣ, ಕೋಡಿ ಅಯ್ಯಪ್ಪ, ಕೋಡಿ ನಾಗೇಶ್, ಕೋಡಿ ಚಂದ್ರಶೇಖರ್, ಕೋಡಿ ಭರತ್, ಕೋಡಿ ಈಶ್ವರ, ಕೋಡಿ ಜಗನಾಥ, ರೋಹಿತ್ ಕೋಡಿ, ವಕೀಲರಾದ ಕೋಡಿ ಜಗದೀಶ್, ಕೋಡಿ ದೇವಕ್ಕಿ, ಕೋಡಿ ಜಾನಕಿ, ಕೋಡಿ ಜಯಲಕ್ಷ್ಮಿ, ಕೋಡಿ ಪ್ರಕಾಶ್ ಅವರ ಪುತ್ರ ಕೋಡಿ ವಿನೋದ್, ಸೊಸೆ ಶ್ವೇತ ವಿನೋದ್, ಅಳಿಯ ಕಡ್ಲೇರ ಯಶವಂತ್, ಪುತ್ರಿ ತುಳಸಿ, ಶ್ರೀತಲಕಾವೇರಿ ದೇವಾಲಯದ ವ್ಯವಸ್ಥಾಪಕ ಕೋಡಿ ಮಹೇಶ್ ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.
ಇವರು ಈ ಹಿಂದೆ ಶ್ರೀತಲಕಾವೇರಿಯ ಅಗಸ್ತೇಶ್ವರನ ಶಿವಲಿಂಗಕ್ಕೆ ಬೆಳ್ಳಿಯ ಮುಖವಾಡ ಮಾಡಿಕೊಟ್ಟಿದ್ದರು. ಕೊಡಗಿನ ಪ್ರಖ್ಯಾತೆ ನಾದಸ್ವರ ತಂಡವಾದ ಕುಶಾಲನಗರದ ವಾಸುದೇವ ತಂಡದಿಂದ ದೇವಾಲಯದ ಆವರಣದಲ್ಲಿ ನಾದಸ್ವರ ಕಾರ್ಯಕ್ರಮ ಏರ್ಪಡಿಸಲಾಗಿತ್ತು.