ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಎಸ್.ಲಾವಣ್ಯ ಅಧಿಕಾರ ಸ್ವೀಕಾರ

13/11/2020

ಮಡಿಕೇರಿ ನ.13 : ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಎಸ್.ಲಾವಣ್ಯ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತಿದ್ದ ಎಸ್.ಲಾವಣ್ಯ ಅವರು ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ (ಪ್ರ) ಅಧಿಕಾರ ವಹಿಸಿಕೊಂಡಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದ ಕೆಲಸ ಕಾರ್ಯಗಳಿಗೆ ಸಂಬಂಧಪಟ್ಟ ಹಾಗೂ ಅರೆ ಸರ್ಕಾರಿ ಇತರೆ ಯಾವುದೇ ಮುಖ್ಯವಾದ ಪತ್ರಗಳನ್ನು ಎಸ್.ಲಾವಣ್ಯ, ಆಯುಕ್ತರು (ಪ್ರ), ನಗರಾಭಿವೃದ್ಧಿ ಪ್ರಾಧಿಕಾರ, ಕೆಎಸ್‍ಆರ್‍ಟಿಸಿ ಬಸ್ ಡಿಪೋ ಹತ್ತಿರ, ಮಡಿಕೇರಿ-571201, ಕಚೇರಿ ದೂ.ಸಂ; 08272-225883, ಈ ಮೇಲ್ ವಿಳಾಸ; mudamadikeri@yahoo.inಇಲ್ಲಿಗೆ ತಲುಪಿಸುವಂತೆ ಕೋರಲಾಗಿದೆ.