ಕೊಡಗು ಜಿಲ್ಲೆಯಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಷರತ್ತುಬದ್ಧ ಅನುಮತಿ

14/11/2020

ಮಡಿಕೇರಿ ನ.14 : ಕೊಡಗು ಜಿಲ್ಲೆಯಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತ ಷರತ್ತುಬದ್ಧವಾಗಿ ಅನುಮತಿ ನೀಡಿದೆ.
“ಹಸಿರು ಪಟಾಕಿ”ಗಳನ್ನು ಗುರುತಿಸುವ ಬಗ್ಗೆ ವಿವರಣೆ ಇದ್ದು, ಈ ಪಟಾಕಿ ತಯಾರಿಕಾ ಘಟಕಗಳು ಹಸಿರು ಪಟಾಕಿಗಳನ್ನು ತಯಾರಿಸುವ ಘಟಕಗಳು ಎಂಬ ಬಗ್ಗೆ ಅSಖI-ಓಇಇಖI ಸಂಸ್ಥೆ ದೃಢೀಕರಿಸಿರುತ್ತದೆ ಮತ್ತು ಹಸಿರು ಬಣ್ಣದ ಲೋಗೋ ಇರುತ್ತದೆ ಎಂಬ ಬಗ್ಗೆ ಸ್ಪಷ್ಠೀಕರಣ ಇದೆ. ಪರವಾನಗಿಯನ್ನು ಕೇವಲ ಹಸಿರು ಪಟಾಕಿಗಳನ್ನು ಮಾರಾಟ ಮಾಡಬೇಕೆಂಬ ಷರತ್ತಿನ ಮೇಲೆ ನೀಡಲಾಗಿದೆ.
ಪ್ರಸಕ್ತ ಸಾಲಿನ ದೀಪಾವಳಿ ಹಬ್ಬದ ಸಂಬಂಧ ತಾತ್ಕಾಲಿಕವಾಗಿ ಪಟಾಕಿ ಮಾರಾಟಕ್ಕೆ ಪರವಾನಗಿ ಕೋರಿ ಸಂಬಂಧಪಟ್ಟ ಇಲಾಖೆಗಳ ನಿರಾಕ್ಷೇಪಣಾ ಪತ್ರ ಹಾಗೂ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಗಳು ಜಿಲ್ಲಾಡಳಿತಕ್ಕೆ ಸ್ವೀಕೃತವಾಗಿದ್ದು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು “ಹಸಿರು ಪಟಾಕಿ”ಗಳನ್ನು ಮಾತ್ರ ನಿಗಧಿತ ದಿನಾಂಕ/ ಸಮಯದಲ್ಲಿ ಮಾರಾಟ ಮಾಡಲು ಹಾಗೂ ಬಳಸಲು ಮಾರ್ಗಸೂಚಿ ಪಾಲಿಸುವಂತೆ ಜಿಲ್ಲಾಡಳಿತ ಷರತ್ತು ಬದ್ಧವಾಗಿ ಅನುಮತಿ ನೀಡಿದೆ.
ಆದ್ದರಿಂದ, ಸರ್ಕಾರದ ಆದೇಶ ಮತ್ತು ಮಾರ್ಗಸೂಚಿಯನ್ನು ಹಸಿರು ಪಟಾಕಿ ಮಾರಾಟಗಾರರು ಪಾಲಿಸಬೇಕು. ಪಟಾಕಿ ಮಾರಾಟ ಮಾಡಲು ಅರ್ಜಿ ಸಲ್ಲಿಕೆಯಾಗಿದ್ದ ಕುಶಾಲನಗರ, ಕೊಡ್ಲಿಪೇಟೆ, ಶನಿವಾರ ಸಂತೆ, ಸೋಮವಾರಪೇಟೆ, ಸುಂಟಿಕೊಪ್ಪ, ಹೆಬ್ಬಾಲೆ ಮತ್ತು ವಿರಾಜಪೇಟೆ ಈ ಸ್ಥಳಗಳಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.