“ಕೊಡಗು ಕ್ವಿಝ್” ಪುಸ್ತಕ ಅನಾವರಣ : ಸೈನಿಕ ಪರಂಪರೆಯನ್ನು ಕೊಂಡಾಡಿದ ಸಂಗೀತ ನಿರ್ದೇಶಕ ವಿ.ಮನೋಹರ್

November 14, 2020

ಮಡಿಕೇರಿ ನ.14 : ಸೈನಿಕ ಪರಂಪರೆಯ ಶ್ರೀಮಂತ ಸಂಸ್ಕøತಿ ಹೊಂದಿರುವ ಕೊಡಗು ಜಿಲ್ಲೆಗೆ ಭಾರತೀಯರೆಲ್ಲ ಋಣಿಗಳಾಗಿರಬೇಕೆಂದು ಖ್ಯಾತ ಸಂಗೀತ ನಿರ್ದೇಶಕ ವಿ.ಮನೋಹರ್ ಅಭಿಪ್ರಾಯೊಟ್ಟಿದ್ದಾರೆ.
ನಗರದ ಬಾಲಭವನದಲ್ಲಿ ಸದಭಿರುಚಿ ಪ್ರಕಾಶನದಿಂದ ಹೊರ ತರಲಾಗಿರುವ, ಸಾಹಿತಿಗಳು ಹಾಗೂ ಆಕಾಶವಾಣಿ ಉದ್ಘೋಷಕರಾದ ಸುಬ್ರಾಯ ಸಮಪಾಜೆ ಅವರಿಂದ ರಚಿತವಾಗಿರುವ “ಕೊಡಗು ಕ್ವಿಝ್” ಪುಸ್ತಕವನ್ನು ಅನಾವರಣಗೊಳಿಸಿ ಅವರು ಮಾತನಾಡಿ, ಪುಟ್ಟ ಕೊಡಗು ಜಿಲ್ಲೆ ರಾಷ್ಟ್ರ ರಕ್ಷಣೆಗೆ ಅಪಾರವಾದ ಕೊಡುಗೆಯನ್ನು ನೀಡಿದ್ದು, ಇಂತಹ ನಾಡಿನ ಬಗ್ಗೆ ಪ್ರತಿಯೊಬ್ಬರು ಕೃತಜ್ಞರಾಗಿರಬೇಕಾದುದು ಅತ್ಯವಶ್ಯವೆಂದು ಅಭಿಪ್ರಾಯಿಸಿದರು.
ಸುಬ್ರಾಯ ಸಂಪಾಜೆ ಅವರು ರಚಿಸಿರುವ ಕೊಡಗು ಕ್ವಿಝ್ ಪುಸ್ತಕ, ಕೊಡಗಿನ ಕುರಿತಾದ ಮಾಹಿತಿಗಳನ್ನು ಒಳಗೊಂಡ ಅಮೂಲ್ಯ ಕೃತಿಯಾಗಿದ್ದು, ಇಂತಹ ಪುಸ್ತಕ ಪ್ರತಿಯೊಬ್ಬರ ಮನೆಯಲ್ಲಿ ಇರಬೇಕೆಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಇಡೀ ಪ್ರಪಂಚವನ್ನು ಕಾಡುತ್ತಿರುವ ಕೊರೊನಾ ಸಾಂಕ್ರಾಮಿಕದ ಕುರಿತು ಪ್ರಸ್ತಾಪಿಸಿದ ವಿ.ಮನೋಹರ್, ಮನುಷ್ಯ ಮಾಡಿದ ತಪ್ಪಿಗೆ ಕೊರೊನಾ ಸಾಂಕ್ರಾಮಿಕ ಶಿಕ್ಷೆಯಾಗಿ ಕಾಡುತ್ತಿದೆ. ಇಂತಹ ಮಾರಕ ಸಾಂಕ್ರಾಮಿಕವನ್ನು ತಡೆಯಲು ಮಾಡಿರುವ ಕಾನೂನುಗಳೆ ಪಾಲನೆಯಾಗದಿರುವ ಪರಿಸ್ಥಿತಿಗಳನ್ನು ನಾವಿಂದು ಕಾಣುತ್ತಿದ್ದೇವೆಂದು ವಿಷಾದಿಸಿ, ಕಣ್ಣಿÂಗೆ ಕಾಣದ ವೈರಸ್‍ಗೆ ನಾವಿಂದು ತಲೆ ಬಾಗಿರುವುದಾಗಿ ಅನಿಸಿಕೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಡಿಕೇರಿ ಆಕಾಶವಾಣಿ ಉದ್ಘೋಷಕರಾದ ಕೂಪದಿರ ಶಾರದಾ ನಂಜಪ್ಪ ಮಾತನಾಡಿ, ಸುಬ್ರಾಯ ಸಂಪಾಜೆ ಅವರು ಸಾಹಿತ್ಯ, ಸಂಸ್ಕøತಿ, ಯಕ್ಷಗಾನ ಕಲೆಗಳಲ್ಲಿ ವಿಶೇಷವಾದ ಆಸಕ್ತಿ ಹೊಂದಿದವರಾಗಿದ್ದು, ಇವರು ಮೊದಲು “ಪುಟ್ಟಕ್ಕ” ಎನ್ನುವ ಕಿರು ಕಾದಂಬರಿಯನ್ನು ರಚಿಸಿದ್ದು, ನಂತರದ ದಿಗಳಲ್ಲಿ “ಪುರಾಣ ಯಾನ” ಎನ್ನುವ ಕೃತಿಯನ್ನು, ರಾಮಾಯಣವನ್ನು ಆಧರಿಸಿದ “ರಸ ರಾಮಾಯಣ” ಎನ್ನುವ ಕೃತಿಗಳನ್ನು ರಚಿಸಿರುವುದಾಗಿ ಮಾಹಿತಿಯನ್ನಿತ್ತರು.
ಸುಬ್ರಾಯ ಸಂಪಾಜೆ ಅವರ “ಕೊಡಗು ಕ್ವಿಝ್” ಪುಸ್ತಕ ಕೊಡಗಿನ ಕುರಿತ ಸಾಕಷ್ಟು ಮಾಹಿತಿಯನ್ನು ಒ¼ಗೊಂಡಿದ್ದು, ಭವಿಷ್ಯದ ದಿನಗಳಲ್ಲಿ ಇದರ ಮುಂದಿನ ಭಾಗಗಳನ್ನು ಅವರು ಹೊರ ತರುವಂತಾಗಲಿ ಎಂದು ಹಾರೈಸಿದರು.
ಕೃತಿ ಕರ್ತೃ ಸುಬ್ರಾಯ ಸಂಪಾಜೆ ಮಾತನಾಡಿ, ಪುಸ್ತಕ ರಚನೆಯ ಹಿಂದೆ ಈ ನೆಲದ ಋಣ ತೀರಿಸುವ ಜವಾಬ್ದಾರಿ ಇತ್ತೆಂದು ಅಭಿಪ್ರಾಯಿಸಿ. ಪುಸ್ತಕ ರಚನೆ ನಿರಪೇಕ್ಷ ದೃಷ್ಟಿಯಿಂದ ಮಾಡಿದ್ದು, ಇದರಿಂದ ಹೆಚ್ಚಿನದನ್ನು ಪಡೆಯುವ ಉದ್ದೇಶಗಳಿಲ್ಲವೆಂದು ಸ್ಪಷ್ಟಪಡಿಸಿದರು.
ಸಭಾಧ್ಯಕ್ಷತೆ ವಹಿಸಿದ್ದ ಡಾ. ನಡಿಬೈಲು ಉದಯಶಂಕರ್ ಮಾತನಾಡಿ, ಸದಭಿರುಚಿ ಪ್ರಕಾಶನದ ಶಂಕರ ಭಟ್ ಅವರ ಸಾಹಿತ್ಯ ಸೇವೆಯನ್ನು ಪ್ರಸ್ತಾಪಿಸಿ, ಇವರು ತಮ್ಮ ಪ್ರಕಾಶನದ ಪುಸ್ತಕಗಳನ್ನು ಮನೆ ಮನೆಗೆ ತೆರಳಿ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವ ಪ್ರಯತ್ನವನ್ನು ನಡೆಸಿದವರು. ಇವರಿಂದ ಇದೀಗ ಸುಬ್ರಾಯ ಸಂಪಾಜೆ ಅವರು ರಚಿಸಿದ ಕೊಡಗು ಕ್ವಿಝ್ ಪುಸ್ತಕ ಹೊರ ಬಂದಿರುವುದು ನಿಜಕ್ಕೂ ಮೆಚ್ಚುಗೆಯ ವಿಚಾರವೆಂದು ಅಭಿಪ್ರಾಯಿಸಿದರು.
ಸನ್ಮಾನ- ಕೊಡಗು ಕ್ವಿಝ್ ಪುಸ್ತಕ ಪ್ರಕಾಶನಕ್ಕೆ ನೆರವನ್ನಿತ್ತ ಹೆಚ್.ಎಸ್. ಅನಂತ ಸುಬ್ಬರಾವ್ ಅವರನ್ನು ಇದೇ ಸಂದರ್ಭ ಸದಭಿರುಚಿ ಪ್ರಕಾಶನದಲ್ಲಿ ಶಂಕರ್ ಭಟ್ ಅವರು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗೀತಾ ಗಿರೀಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಅಪರ್ಣಾ ಹರೀಶ್ ಸರ್ವರನ್ನು ವಂದಿಸಿದರು.

error: Content is protected !!