ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಯಾಗ

15/11/2020

ಮಡಿಕೇರಿ ನ.15 : ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಭಾನುವಾರದÀಂದು ಮೇಕೇರಿಯ ಶ್ರೀ ಧನ್ವಂತರಿ ಸನ್ನಿಧಿಯಲ್ಲಿ ಕೊಡಗು ಜಿಲ್ಲಾ ನೇಷನಲ್ ಇಂಟಿಗ್ರೇಟೆಡ್ ಮೆಡಿಕಲ್ ಎಸೋಸಿಯೇಷನ್ (ನಿಮಾ) ವತಿಯಿಂದ ಸಾಯಿ ಮಂದಿರದ ಸಹಯೋಗದೊಂದಿಗೆ ಧನ್ವಂತರಿ ಯಾಗ ಮತ್ತು ಪ್ರಾಣಾಯಾಮ ತರಬೇತಿ ಶಿಬಿರ ನಡೆಯಿತು.
ಜಾಗತಿಕ ಸಂಕಟದ ಇಂದಿನ ದಿನಗಳಲ್ಲಿ ಧನ್ವಂತರಿ ಹೋಮವು ಪರಿಸರ ರಕ್ಷಣೆ ಮತ್ತು ಆರೋಗ್ಯ ವೃದ್ಧಿಗೆ ಸಹಾಯಕ. ದೀರ್ಘಕಾಲೀನ ಕಾಯಿಲೆಗಳಿಗೆ ಇದು ದೈವಿಕ ಪರಿಹಾರವಾಗಿದೆ ಎಂದು ಅಭಿಪ್ರಾಯಪಟ್ಟ ವೇದಮೂರ್ತಿ ನರಸಿಂಹ ಭಟ್ಟರು ವೇದೋಕ್ತ ವಿಧಿಯಂತೆ ಯಾಗವನ್ನು ನಡೆಸಿಕೊಟ್ಟರು.
ಯೋಗ ಪದವೀಧರೆ ಡಾ.ವಿನಯಶ್ರೀ ಸುಲಭ ಪ್ರಾಣಾಯಾಮ ತರಬೇತಿಯನ್ನು ನೀಡಿ ಅನುದಿನವೂ ಈ ಅಭ್ಯಾಸವನ್ನು ಮುಂದುವರಿಸುವಂತೆ ಕಿವಿಮಾತು ಹೇಳಿದರು.
ಸನ್ಮಾನ-ಮಡಿಕೇರಿಯಲ್ಲಿ ಸುಮಾರು ಐದು ದಶಕಗಳಿಂದ ಆಯುರ್ವೇದ ವೈದ್ಯರಾಗಿ ಜನಪ್ರಿಯರಾಗಿರುವ ಪ್ರಸಾದ್ ಕ್ಲಿನಿಕ್‍ನ ಡಾ. ರವಿಪ್ರಸಾದರನ್ನು ಕೊಡಗು ಐ.ಎಂ.ಎ. ಅಧ್ಯಕ್ಷರಾದ ಡಾ.ಶ್ಯಾಮ್ ಅಪ್ಪಣ್ಣ ಅವರು ಸನ್ಮಾನಿಸಿದರು.
ಮುಖ್ಯ ಅತಿಥಿಗಳಾಗಿ ಇ.ಎನ್.ಟಿ. ತಜ್ಞರಾದ ಡಾ.ಮೋಹನ್ ಅಪ್ಪಾಜಿ ಪಾಲ್ಗೊಂಡಿದ್ದರು. ಕೊಡಗು ನಿಮಾದ ಅಧ್ಯಕ್ಷ ಡಾ. ರಾಜಾರಾಮ್ ಕಾರ್ಯಕ್ರಮ ನಿರೂಪಿಸಿದರು. ಡಾ ಪದ್ಮನಾಭ, ಡಾ ಉದಯ ಕುಮಾರ್ ಸಾಯ, ಡಾ ಮಹೇಶ್, ಡಾ.ಶೈಲಜಾ ಮುರಳೀಧರ್, ಡಾ. ಪುರುಷೋತ್ತಮ, ಡಾ. ಯು. ಪಿ. ಜಯರಾಮ್, ಡಾ. ಜ್ಯೋತಿ ರಾಜಾರಾಮ್, ಡಾ. ರಾಜೇಂದ್ರ, ಡಾ. ಶೈಲಜಾ ರಾಜೇಂದ್ರ, ಡಾ. ಸೌಮ್ಯ ಗಣರಾಜ್, ಡಾ. ಲತಾ ಸುಧೀರ್, ಡಾ. ಶುಭಾ ರಾಜ್, ಡಾ. ಈಶ್ವರಿ, ಡಾ ಉದಯಶಂಕರ್, ಡಾ. ಶ್ಯಾಮ್ ಪ್ರಸಾದ್ ಮೊದಲಾದ ವೈದ್ಯರು ಪಾಲ್ಗೊಂಡಿದ್ದರು.