ಸುಂಟಿಕೊಪ್ಪ ಯುವ ಜೆಡಿಎಸ್‍ನಿಂದ ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಣೆ

15/11/2020

ಮಡಿಕೇರಿ ನ.15 : ಮಕ್ಕಳ ದಿನಾಚರಣೆ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ಸುಂಟಿಕೊಪ್ಪ ಯುವ ಜೆಡಿಎಸ್ ಹೋಬಳಿ ಅಧ್ಯಕ್ಷÀ ಶ್ರೀರಾಮ್ ಯಂಕನ ಅವರ ನೇತೃತ್ವದಲ್ಲಿ ಮಕ್ಕಳು ಹಾಗೂ ವಯೋವೃದ್ಧರಿಗೆ ಸಿಹಿ ಹಂಚಲಾಯಿತು.
ಸ್ವಸ್ಥ ಶಾಲಾ ಮಕ್ಕಳಿಗೆ ಮತ್ತು ವಿಕಾಸ್ ಜನಸೇವಾ ಟ್ರಸ್ಟ್‍ನ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಪಕ್ಷದ ಪ್ರಮುಖರು ಎಲ್ಲರಿಗೂ ಸಿಹಿ ವಿತರಿಸಿ ಹಬ್ಬದ ಸಂಭ್ರಮವನ್ನು ವಿಶಿಷ್ಟ ರೀತಿಯಲ್ಲಿ ಹಂಚಿಕೊಂಡರು. ವಯೋವೃದ್ಧರ ಆರೋಗ್ಯ ವಿಚಾರಿಸಿ ಆತ್ಮಸ್ಥೈರ್ಯ ತುಂಬಿದರು.
ಜಿಲ್ಲಾ ವಕ್ತಾರ ಜಿನಾಸ್, ಸುಂಟಿಕೊಪ್ಪ ಹೋಬಳಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷÀ ಝಕ್ರಿಯಾ, ಸುಂಟಿಕೊಪ್ಪ ಯುವ ಜೆಡಿಎಸ್ ನಗರ ಉಪಾಧ್ಯಕ್ಷ ಹ್ಯಾರಿಸ್, ಪ್ರಧಾನ ಕಾರ್ಯದರ್ಶಿ ಪಟ್ಟೆಮನೆ ತೀರ್ಥಪ್ರಸಾದ್, ಯುವ ಮುಖಂಡ ಯಂಕನ ಚಲನ್, ವಿಕಾಸ್ ಜನಸೇವಾ ಟ್ರಸ್ಟ್‍ನ ಅಧ್ಯಕ್ಷ ರಮೇಶ್ ಮತ್ತಿತರರು ಈ ಸಂದರ್ಭ ಹಾಜರಿದ್ದರು.