ಸೋಮವಾರಪೇಟೆಯಲ್ಲಿ ಅಕ್ರಮ ಬೀಟೆ ಮತ್ತು ತೇಗದ ಮರ ಸಾಗಾಟ : ಅರಣ್ಯ ಇಲಾಖೆಯಿಂದ ಐವರು ಆರೋಪಿಗಳ ಬಂಧನ

November 17, 2020

ಮಡಿಕೇರಿ ನ. 17 : ಹುದುಗೂರು ಮೀಸಲು ಅರಣ್ಯದಿಂದ ಬೀಟೆ ಮತ್ತು ತೇಗದ ಮರಗಳನ್ನು ಕಡಿದು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವಾಹನ ಸಹಿತ ಬಂಧಿಸುವಲ್ಲಿ ಸೋಮವಾರಪೇಟೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

ಹಾನಗಲ್ಲು ಗ್ರಾಮದ ಅಭಿಷೇಕ್ ಶೆಟ್ಟಳ್ಳಿ ತೋಟದಲ್ಲಿ ಬೀಟೆ ಮತ್ತು ತೇಗದ ಮರದ ಸೊತ್ತುಗಳನ್ನು ತಂದು ದಾಸ್ತಾನಿರಿಸಿದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು, ಕೆಎ-55ಎಂ-7125 ಡಸ್ಟರ್ ವಾಹನಕ್ಕೆ ತುಂಬುತ್ತಿದ್ದ ಆರೋಪಿ ಹಾನಗಲ್ಲು ಗ್ರಾಮದ ಅಬ್ದುಲ್ ರೆಹಮಾನ್, ರಾಜು, ಬಿ.ಎಸ್.ರಮೇಶ, ಎಸ್.ಹೆಚ್ ಮೋಹನ್ ಕುಮಾರ್, ಹೆಚ್.ಆರ್.ಸಂಪತ್ ಎಂಬವರನ್ನು ಬಂಧಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಗಳಾದ ಅಭೀಷೇಕ್, ಡಿ.ಸಿ. ಜಗನ್ನಾಥ ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಮುಂದುವರೆಸಿದ್ದಾರೆ.

ಸೋಮವಾರಪೇಟೆ ಉಪ ವಿಭಾಗ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ ನೆಹರು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಸುಮಂತ್, ಕೆ.ಸಿ. ನಾರಾಯಣ, ಅರಣ್ಯ ರಕ್ಷಕರುಗಳಾದ ಹೆಚ್.ಪಿ.ರಾಜಣ್ಣ, ಭರಮಪ್ಪ, ಈರಣ್ಣ ದಳವಾಯಿ, ಅರಣ್ಯವೀಕ್ಷಕರುಗಳಾದ ಪ್ರಸಾದ್ ಕುಮಾರ್, ಮೋಹನ್ ಕುಮಾರ್, ಸುಂದರ್, ದಿವಾಕರ, ವಾಹನಚಾಲಕ ಸಂತೋಷ್, ನಂದೀಪ್ ಭಾಗವಹಿಸಿದ್ದರು.

error: Content is protected !!