ಚೆಟ್ಟಳ್ಳಿಯಲ್ಲಿ ನೂತನ ಕೊಡವ ಸಮಾಜ ಅಸ್ತಿತ್ವಕ್ಕೆ : ಅಧ್ಯಕ್ಷರಾಗಿ ಮುಳ್ಳಂಡ ರತ್ತು ಚಂಗಪ್ಪ ಆಯ್ಕೆ

17/11/2020

ಮಡಿಕೇರಿ ನ. 17 : ಚೆಟ್ಟಳ್ಳಿಯಲ್ಲಿ ನೂತನ ಕೊಡವ ಸಮಾಜವನ್ನು ಚೆಟ್ಟಳ್ಳಿ ಜೋಮಾಲೆ ಪೊಮ್ಮಕ್ಕ ಕೂಟದ ಅಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪಬೆಳಗುವುದರ ಮೂಲಕ ಉದ್ಘಾಟಿಸಿ, ನಂತರ ಮಾತನಾಡಿದ ಅವರು ಕೊಡವ ಆಚಾರ ವಿಚಾರ ಸಂಪ್ರದಾಯ ಆಚರಣೆಗಳನ್ನು ಉಳಿಸಿ ಬೆಳೆಸಲು ಚೆಟ್ಟಳ್ಳಿಯಲ್ಲಿ ಕೊಡವ ಸಮಾಜವನ್ನು ಅಸ್ಥಿತ್ವಗೊಳಿಸಬೇಕೆಂದು ತೀಮಾರ್ನಿಸಿ ಚೆಟ್ಟಳ್ಳಿ ಕೊಡವ ಸಮಾಜವನ್ನು ಕಾನೂನಾತ್ಮಕವಾಗಿ ನೊಂದಾಯಿಸಲಾಗಿದೆ ಎಂದರು. ಸಂಘದ ನಿಯಮ, ಮುಂದಿನ ಯೋಜನೆ ಬಗ್ಗೆ ತಿಳಿಸಿದರು.

ನೂತವಾಗಿ ಆಯ್ಕೆಗೊಂಡ ಕೊಡವ ಸಮಾಜದ ಅಧ್ಯಕ್ಷ ಮುಳ್ಳಂಡ ರತ್ತು ಚಂಗಪ್ಪ ಮಾತನಾಡಿ ಸಂಘದ ಅಧ್ಯಕ್ಷನಾಗಿ ಆಯ್ಕೆ ಮಾಡಿದಕ್ಕೆ ಎಲ್ಲರಗೂ ವಂದಿಸಿ ನೂತನವಾಗಿ ಆಯ್ಕೆಗೊಂಡ ಆಡಳಿತ ಮಂಡಳಿಯು ಹಲವು ಯೋಜನೆಗಳನ್ನು ಕೈಗೊಳ್ಳುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಕಾರ್ಯಕ್ರಮಲ್ಲಿ ಸಂಘದ ಲೋಗೋವನ್ನು ಬಿಡುಗಡೆಗೊಳಿಸಲಾಯಿತು.
ಸಂಘದ ಬೈಲಾವನ್ನು ಐಚೆಟ್ಟಿರ ಸುನಿತ ಮಾಚಯ್ಯ ಓದಿ ಸಭೆಯಲ್ಲಿ ಅಂಗೀಕರಿಸಲಾಯಿತು.
ಚೆಟ್ಟಳ್ಳಿ ಕೊಡವ ಸಮಾಜಕ್ಕೆ ನೂತನ ಕಮಿಟಿ ಸದಸ್ಯರನ್ನು ಆಯ್ಕೆ ಮಾಡಲಾಗಿದ್ದು, ಸಂಘದ ಅಭಿವೃದ್ಧಿ ಬಗ್ಗೆ ಹಲವು ಸದಸ್ಯರು ಸಲಹೆ ಸೂಚನೆಯನ್ನು ನೀಡಿದರು.
ವೇದಿಕೆಯಲ್ಲಿ ಸಮಾಜದ ಟ್ರಸ್ಟಿಗಳಾದ ಪುತ್ತರಿರ ಕಾಶಿಸುಬ್ಬಯ್ಯ, ಪುತ್ತರಿರ ಗಂಗೆ ಅಚ್ಚಯ್ಯ, ಐಚೆಟ್ಟಿರ ಮಾಚಯ್ಯ, ಕಾಡ್ಯಮಾಡ ವಿಸ್ಸಿ ಅಪ್ಪಯ್ಯ, ಪುತ್ತರಿರ ಕರುಣ್‍ಕಾಳಯ್ಯ, ಕಾರ್ಯಕ್ರಮದ ಅಂಗವಾಗಿ ಪಳಂಗಂಡ ಸುಮಿ ಅಪ್ಪಯ್ಯ ಸ್ವಾಗತಿಸಿ, ಮುಳ್ಳಂಡ ಮಾಯಮ್ಮ ತಮ್ಮಯ್ಯ ವಂದಿಸಿ, ಐಚೆಟ್ಟಿರ ಸುನಿತ ಮಾಚಯ್ಯ ನಿರೂಪಿಸಿ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಚೆಟ್ಟಳ್ಳಿ ಕೊಡವ ಸಮಾಜಕ್ಕೆ ನೂತನ ಪಧಾದಿಕಾರಿಗಳ ಆಯ್ಕೆ :
ಅಧ್ಯಕ್ಷರಾಗಿ ಮುಳ್ಳಂಡ ರತ್ತು ಚಂಗಪ್ಪ, ಉಪಾಧ್ಯಕ್ಷರಾಗಿ ಐಚೆಟ್ಟಿರ ಸುನಿತ ಮಾಚಯ್ಯ, ಕಾರ್ಯದರ್ಶಿ ಪುತ್ತರಿರ ಕರುಣ್‍ಕಾಳಯ್ಯ, ಜಂಟಿಕಾರ್ಯದರ್ಶಿ ಮುಳ್ಳಂಡ ಶೋಭಾ ಚಂಗಪ್ಪ, ಖಜಾಂಜಿ ಪುತ್ತರಿರ ಗಂಗೆ ಅಚ್ಚಯ್ಯ, ಜಂಟಿಕಾರ್ಯದರ್ಶಿ ಐಚೆಟ್ಟಿರ ಉಮೇಶ್, ಕಾನೂನು ಸಲಹೆಗಾರರಾಗಿ ಕಡೇಮಾಡ ವಿನ್ಸಿ ಅಪ್ಪಯ್ಯ, ನಿದೇಶಕರಾಗಿ ಪುತ್ತರಿರ ಕಾಶಿ ಸುಬ್ಬಯ್ಯ, ಬಟ್ಟೀರ ನವೀನ್ ನಾಣಯ್ಯ, ಚೋಳಪಂಡ ನಾಣಯ್ಯ, ಕೊಂಗೇಟಿರ ಕುಸುಮ ಪೊನ್ನಪ್ಪ, ಪಳಂಗಂಡ ಶ್ಯಾಂಕಾಳಪ್ಪ ಆಯ್ಕೆಯಾದರು.