ಅಕ್ರಮ – ಸಕ್ರಮ ಸಮಿತಿಯ ಅಧ್ಯಕ್ಷರಾಗಿ ರವಿಕುಶಾಲಪ್ಪ ನೇಮಕ

November 17, 2020

ಮಡಿಕೇರಿ ನ.17 ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ (ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೊಳಪಡುವ ಮಡಿಕೇರಿ ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳನ್ನೊಳಗೊಂಡ) ಹೆಚ್ಚುವರಿ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ (ಅಕ್ರಮ ಸಕ್ರಮ) ಸಮಿತಿಯನ್ನು ಮುಂದಿನ ಆದೇಶದವರಗೆ ರಚಿಸಲಾಗಿದೆ.
ಸಮಿತಿಯ ಅಧ್ಯಕ್ಷರಾಗಿ ಮುಕ್ಕೋಡ್ಲು ಗ್ರಾಮದ ಶಾಂತೆಯಂಡ ರವಿಕುಶಾಲಪ್ಪ ಅವರು ಆಯ್ಕೆಯಾಗಿದ್ದಾರೆ. ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾಮದ ಕವಿತಾ ಪ್ರಭಾಕರ್(ಸದಸ್ಯರು/ಮಹಿಳೆ), ತಣ್ಣಿಮಾನಿ ಗ್ರಾಮದ ಮಿಟ್ಟು (ಸದಸ್ಯರು/ಪರಿಶಿಷ್ಟ ಪಂಗಡ), ಎಂ.ಚೆಂಬು ಗ್ರಾಮದ ಸುಬ್ರಹ್ಮಣ್ಯ ಉಪಾಧ್ಯಾಯ (ಸದಸ್ಯರು/ಸಾಮಾನ್ಯ) ಹಾಗೂ ಸಂಬಂಧಪಟ್ಟ ತಾಲ್ಲೂಕಿನ ತಹಶೀಲ್ದಾರ್ (ಕಾರ್ಯದರ್ಶಿ) ನೇಮಕ ಮಾಡಲಾಗಿದೆ ಎಂದು ಕಂದಾಯ ಇಲಾಖೆಯ(ಭೂ ಮಂಜೂರಾತಿ) ಪೀಠಾಧಿಕಾರಿ ಸಿ.ವಿಮಲಮ್ಮ ಅವರು ತಿಳಿಸಿದ್ದಾರೆ.

error: Content is protected !!