ಜಾನಪದ ಗೀತೆ ಸ್ಪರ್ಧೆ : ನ. 30 ಕೊನೆ ದಿನ

17/11/2020

ಮಡಿಕೇರಿ ನ.17 : ಕರ್ನಾಟಕ ಜಾನಪದ ಪರಿಷತ್ ಕೊಡಗು ಘಟಕದ ವತಿಯಿಂದ ಜಿಲ್ಲಾ ಮಟ್ಟದ ಜಾನಪದ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಭಾಗವಹಿಸುವವರು ಐದು ನಿಮಿಷ ಮೀರದಂತೆ ಜಾನಪದ ಗೀತೆಯನ್ನು ಹಾಡಿ ವೀಡಿಯೋ ಮಾಡಿ 9886181613, 9945411821, 9448048875 ಈ ದೂರವಾಣಿ ಸಂಖ್ಯೆಗಳಿಗೆ ನವೆಂಬರ್, 30 ರೊಳಗೆ ವಾಟ್ಸಾಪ್ ಮೂಲಕ ಕಳುಹಿಸಬೇಕು. ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಗುವುದು ಎಂದು ಅಧ್ಯಕ್ಷ ಬಿ.ಜಿ.ಅನಂತಶಯನ ಅವರು ತಿಳಿಸಿದ್ದಾರೆ.