ವಿರಾಜಪೇಟೆಯಲ್ಲಿ ನ.21 ರಂದು ಪಟ್ಟೋಲೆ ಪಳಮೆ ವಿಚಾರ ಸಂಕಿರಣ

17/11/2020

ಮಡಿಕೇರಿ ನ.17 : ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಕಾವೇರಿ ಕಾಲೇಜು, ವಿರಾಜಪೇಟೆ ಇವರ ಸಹಯೋಗದಲ್ಲಿ ಪಟ್ಟೋಲೆ ಪಳಮೆ-ಆರಬೇರ (ವಿಚಾರ ಸಂಕಿರಣ) ಕಾರ್ಯಕ್ರಮವು ನವೆಂಬರ್, 21 ರಂದು ಬೆಳಗ್ಗೆ 10 ಗಂಟೆಗೆ ವಿರಾಜಪೇಟೆಯ ಅಖಿಲ ಕೊಡವ ಸಮಾಜ ಸಭಾಂಗಣದಲ್ಲಿ ನಡೆಯಲಿದೆ.
ಹಿರಿಯ ಸಾಹಿತಿ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಸಾಹಿತಿ ಬೊವ್ವೇರಿಯಂಡ ನಂಜಮ್ಮ ಚಿಣ್ಣಪ್ಪ, ಅಖಿಲ ಕೊಡವ ಸಮಾಜದ ಉಪಾಧ್ಯಕ್ಷರಾದ ಅಜ್ಜಿಕುಟ್ಟಿರ ಸುಬ್ರಮಣಿ ಮಾದಯ್ಯ, ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಎಸ್. ಪೂವಮ್ಮ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ ಇವರು ಬರೆದ “ಬದ್‍ಕ್‍ರ ನಡೆ ಪುಸ್ತಕ ಮತ್ತು ಕಸ್ತೂರಿ ಗೋವಿಂದಮ್ಮಯ್ಯ ಇವರು ಬರೆದ “ಶ್ರೀರಾಮ ರಸಾಯನ” ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

ತದನಂತರ ಪಟ್ಟೋಲೆ ಪಳಮೆ: ಆರಬೇರದ ವಿಚಾರಗೋಷ್ಠಿ ನಡೆಯಲಿದೆ. ಬೆಳಗ್ಗೆ 11-15 ರಿಂದ 12 ಗಂಟೆಯವರೆಗೆ ನಡೆಯುವ ಗೋಷ್ಠಿ-1ರ ಅಧ್ಯಕ್ಷತೆಯನ್ನು ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷರಾದ ವಾಂಚಿರ ವಿಠಲ ನಾಣಯ್ಯ ಇವರು ವಹಿಸಿಕೊಳ್ಳಲಿದ್ದಾರೆ. ಗೋಣಿಕೊಪ್ಪ ಕಾವೇರಿ ಕಾಲೇಜಿನ ಉಪನ್ಯಾಸಕಿ ಆಂಗೀರ ಕುಸುಮ ಅವರು ಭಾಗವಹಿಸಲಿದ್ದಾರೆ. ಹಾಗೂ “ನಡಿಕೇರಿಯಂಡ ಚಿಣ್ಣಪ್ಪ-ಬಾಳ್ ಬದ್‍ಕ್” ಈ ವಿಷಯದ ಕುರಿತು ಪತ್ರಕರ್ತರಾದ ಐತಿಚಂಡ ರಮೇಶ್ ಉತ್ತಪ್ಪ ಅವರು ವಿಚಾರಮಂಡನೆ ಮಾಡಲಿದ್ದಾರೆ. 12 ರಿಂದ 12.45 ಗಂಟೆಯವರೆಗೆ ನಡೆಯುವ ಗೋಷ್ಠಿ-2ರ ಅಧ್ಯಕ್ಷತೆಯನ್ನು ಕೆ.ಡಿ.ಸಿ.ಸಿ. ಬ್ಯಾಂಕ್‍ನ ನಿವೃತ್ತ ಡಿ.ಜಿ.ಎಂ. ತೋರೆರ ಮುದ್ದಯ್ಯ ಇವರು ವಹಿಸಿಕೊಳ್ಳಲಿದ್ದಾರೆ.
ಅಖಿಲ ಕೊಡವ ಸಮಾಜ ಯೂತ್ ವಿಂಗ್‍ನ ಅಧ್ಯಕ್ಷರಾದ ಚಮ್ಮಟ್ಟಿರ ಪ್ರವೀಣ್ ಉತ್ತಪ್ಪ ಇವರು ಭಾಗವಹಿಸಲಿದ್ದಾರೆ. ಹಾಗೂ “ಕೊಡವ ಸಂಸ್ಕøತಿರ ಚಾರಿತ್ರಿಕ ದಾಖಲೆಯಾಯ್ತ್ ಪಟ್ಟೋಲೆ ಪಳಮೆ” ಎಂಬ ವಿಷಯದ ಕುರಿತಾಗಿ ಕೊಡವ ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ನಿಕಟಪೂರ್ವ ಸಂಯೋಜಕರಾದ ಪ್ರೊ.ಕೋಡೀರ ಲೋಕೇಶ್ ಮೊಣ್ಣಪ್ಪ ಇವರು ವಿಚಾರ ಮಂಡನೆ ಮಾಡಲಿದ್ದಾರೆ.
ನಂತರ ಪಟ್ಟೋಲೆ ಪಳಮೆಯ ಬಗ್ಗೆ ಸಾರ್ವಜನಿಕರು ಪ್ರಬಂಧ ಮಂಡಿಸಲಿದ್ದಾರೆ. ನಂತರ ಸಮಾರೋಪ ಸಮಾರಂಭ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಪ್ರಕಟಿತ ಪುಸ್ತಕ ಮತ್ತು ಸಿ.ಡಿ.ಗಳ ಪ್ರದರ್ಶನ ಮತ್ತು ಮಾರಾಟ ಇರುತ್ತದೆ. ವಿಚಾರ ಮಂಡಿಸುವವರು ಸಾರಾಂಶವನ್ನು kodava.acadamy@gmail.com ಇಮೇಲ್ ವಿಳಾಸಕ್ಕೆ ನವೆಂಬರ್, 20 ರೊಳಗೆ ಕಳುಹಿಸಬಹುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಡಾ. ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.