ರಾಷ್ಟ್ರಪತಿ ಪದಕ ವಿಜೇತ ವೃತ್ತ ನಿರೀಕ್ಷಕ ದಿವಾಕರ್ ಗೆ ಸಂಪಾಜೆಯಲ್ಲಿ ಸನ್ಮಾನ

17/11/2020

ಮಡಿಕೇರಿ ನ.17 : ರಾಷ್ಟ್ರಪತಿ ಪದಕ ಪುರಸ್ಕೃತ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ದಿವಾಕರ್ ಅವರನ್ನು ಚೆಂಬು ಹಾಗೂ ಸಂಪಾಜೆ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದರು.
ಸಂಪಾಜೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಸೂರಜ್ ಹೊಸೂರು ಅವರು ಮಾತನಾಡಿ ದಿವಾಕರ್ ಅವರ ಕಾರ್ಯ ದಕ್ಷತೆಯನ್ನು ಕೊಂಡಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ದಿವಾಕರ್ ಅವರು ಕಾನೂನು, ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವೆಂದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹನೀಫ್ ಸಂಪಾಜೆ, ನಾಪೆÇೀಕ್ಲು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಾಜೇಶ್ವರಿ, ಪಯಸ್ವಿನಿ ಬ್ಯಾಂಕ್ ಅಧ್ಯಕ್ಷ ಅನಂತ, ಸಂಪಾಜೆ ಗ್ರಾ.ಪಂ ಮಾಜಿ ಅಧ್ಯಕ್ಷ ಕುಮಾರ್, ಮೋಹನ್ ಸಂಪಾಜೆ, ಜಿ.ಪಂ ಮಾಜಿ ಸದಸ್ಯ ಮೊಹಿದ್ದೀನ್ ಕುಞ ಕೊಯಿನಾಡು, ಹೊಸೂರು ಮಧು, ಅಜಿತ್, ಭವ್ಯ ಕುಮಾರ್ ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.