ಕಾಂಗ್ರೆಸ್‍ನಿಂದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಜನ್ಮದಿನಾಚರಣೆ

November 17, 2020

ಮಡಿಕೇರಿ ನ. 17 : ಕೊಡಗು ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ 131ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಜವಾಹರಲಾಲ್ ನೆಹರು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ. ಕೆ. ಮಂಜುನಾಥ್ ಕುಮಾರ್, ನೆಹರೂ ಅವರು ಪ್ರಧಾನಿಯಾಗಿ ಆಡಳಿತ ನಡೆಸಿ ದೇಶವನ್ನು ನೂರು ವರ್ಷಗಳ ಮುಂದಕ್ಕೆ ಕೊಂಡೊಯ್ದರೆ, ಬಿಜೆಪಿ ಇಪ್ಪತ್ತು ವರ್ಷ ಹಿಂದಕ್ಕೆ ತಳ್ಳಿದೆ ಎಂದು ಟೀಕಿಸಿದರು.
ಕೆಪಿಸಿಸಿ ಹಿರಿಯ ಮುಖಂಡ ಟಿ. ಪಿ. ರಮೇಶ್ ಮಾತನಾಡಿ, ನೆಹರೂ ಅವರ ಚರಿತ್ರೆಯನ್ನು ಮುಂದಿನ ಪೀಳಿಗೆಗೆ ತಿಳಿಯುವ ಅನಿವಾರ್ಯತೆ ಇದೆ ಎಂದರು.
ಕೆಪಿಸಿಸಿ ಕಾರ್ಯದರ್ಶಿ ಟಿ. ಎಂ. ಶಹೀದ್ ಮಾತನಾಡಿ, ನೆಹರೂ ಅವರ ಕುಟುಂಬ ಅಗರ್ಭ ಶ್ರೀಮಂತರಾಗಿದ್ದು, ಎಲ್ಲವನ್ನೂ ದೇಶಕ್ಕೆ ತ್ಯಾಗ ಮಾಡಿದ್ದನ್ನು ಸ್ಮರಿಸಿದರು.
ಜಿ. ಪಂ. ಮಾಜಿ ಸದಸ್ಯ ಕೊಕ್ಕಲೆರ ಸುಜುತಿಮ್ಮಯ್ಯ ಮಾತನಾಡಿ, ನೆಹರೂ ದೇಶದಲ್ಲಿ ಮಂದಿರ, ಮಸೀದಿ, ಇಗರ್ಜಿ ಕಟ್ಟುವ ಬದಲು ಅಣೆಕಟ್ಟುಗಳನ್ನು ಕಟ್ಟಿ ದೇಶದ ಪ್ರಗತಿ ಸಾಧಿಸಿದರು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರಾ ಮೈನಾ ರವರು ಜಾಗತಿಕ ಮಟ್ಟದಲ್ಲಿ ಅಲಿಪ್ತ ಚಳುವಳಿಯನ್ನು ಹುಟ್ಟುಹಾಕಿ ಮೂರನೇ ವಿಶ್ವಯುದ್ದವನ್ನು ತಡೆದ ಜಗತ್ತಿನ ಮಹಾನ್ ಶಾಂತಿದೂತ ಜವಹರಲಾಲ್ ನೆಹರೂ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ. ಪಿ. ಸುರೇಶ್, ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಕೆ. ಇ. ಮ್ಯಾಥ್ಯು, ಮಾಜಿ ಮೂಡಾ ಅಧ್ಯಕ್ಷ ಬಿ. ಕೆ. ಕೃಷ್ಣ, ನಗರ ಸಭೆ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ, ಉದಯ್ ಕುಮಾರ್, ಯತೀಶ್ ಕುಮಾರ್, ತಜಸ್ಸುಂ, ಸೇವಾದಳ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಯುವಕಾಂಗ್ರೆಸ್ ನಗರಾಧ್ಯಕ್ಷ ಸದಾ ಮುದ್ದಪ್ಪ, ಡಿಸಿಸಿ ಸದಸ್ಯೆ ಗೀತಾ ಧರ್ಮಪ್ಪ, ಬ್ಲಾಕ್ ಯುವಕಾಂಗ್ರೆಸ್ ಅಧ್ಯಕ್ಷ ನಾಪಂಡ ರವಿ, ಬ್ಲಾಕ್ ಅಲ್ಪಸಂಖ್ಯಾತ ಅಧ್ಯಕ್ಷ ಕಲೀಲ್ ಬಾಷ, ನಗರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪ್ರಮುಖರಾದ ರಿಯಾಜ್, ಅಬ್ದುಲ್ ಹಮೀದ್, ನಿಸಾರ್ ಅಹಮದ್, ರಾಣಿ, ಉಷಾ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

error: Content is protected !!