ಸಿಬಿಎಸ್‍ಇ ಮತ್ತು ಐಸಿಎಸ್‍ಇ ಪಠ್ಯ ಪೂರ್ಣ

18/11/2020

ಬೆಂಗಳೂರು ನ.18 : ಶಾಲೆಗಳು ಶೈಕ್ಷಣಿಕ ವರ್ಷದ ಉತ್ತರಾರ್ಧದಲ್ಲಿ ನಡೆಯುತ್ತಿದ್ದು, ಸಿಬಿಎಸ್‍ಇ ಹಾಗೂ ಐಸಿಎಸ್‍ಇ ಬೋರ್ಡ್ ಶಾಲೆಗಳು ಪಠ್ಯ ಭಾಗಗಳನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ.
ಈ ಪೈಕಿ ಕೆಲವು ಶಾಲೆಗಳಲ್ಲಿ ಪಠ್ಯ ಕ್ರಮದ ಭಾಗಗಳನ್ನು ಪೂರ್ಣಗೊಳಿಸಲಾಗಿದ್ದರೆ ಮತ್ತೆ ಕೆಲವು ಶಾಲೆಗಳಲ್ಲಿ ಸ್ವಲ್ಪ ಭಾಗವನ್ನು ಉಳಿಸಿಕೊಂಡಿವೆ. ಮತ್ತೊಂದೆಡೆ ರಾಜ್ಯ ಮಂಡಳಿ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಆನ್ ಲೈನ್ ತರಗತಿಗಳಿಗೆ ಅಗತ್ಯವಿರುವ ತಂತ್ರಜ್ಞಾನದ ಕೊರತೆ ಎದುರಾಗಿದ್ದು, ಆಫ್ ಲೈನ್ ತರಗತಿಗಳಿಗೇ ಹೆಚ್ಚು ಒಲವು ತೋರುತ್ತಿದ್ದಾರೆ.
10 ನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯ ಕ್ರಮದಲ್ಲಿ ಕೇವಲ 3 ಅಧ್ಯಾಯಗಳಷ್ಟೇ ಬಾಕಿ ಇದೆ ಎನ್ನುತ್ತಾರೆ ಸವಲ್ ದಾಸ್ ಜೆಥಾನಿಯ ಸ್ಥಾಪಕರು ಹಾಗೂ ಮ್ಯಾನೇಜಿಂಗ್ ಟ್ರಸ್ಟಿ ಕ್ರೈಸಲಿಸ್ ಹೈ.
ಶಾಲೆಗಳಿಗೆ ಎರಡು ಸಮಸ್ಯೆಗಳನ್ನು ಎದುರಿಸುತ್ತಿವೆ, ಮೊದಲನೆಯದ್ದು ಶಾಲೆಗಳ ಪುನಾರಂಭಗೊಳ್ಳುವ ದಿನಾಂಕ ಹಾಗೂ ಎರಡನೆಯದ್ದು ಲಸಿಕೆ ಬರುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದು ಬೇಡವೆಂಬ ಪೆÇೀಷಕರ ಮನಸ್ಥಿತಿ, ಮಕ್ಕಳಿಗೆ ಕೊರೋನಾ ಹರಡೀತು ಎಂಬ ಭಯದಿಂದ ಮಕ್ಕಳಿಂದ ಮನೆಯಲ್ಲಿರುವ ಹಿರಿಯರಿಗೆ ಕೊರೋನಾ ಹರಡಿದರೆ ಎಂಬ ಭಯ ಹೆಚ್ಚು ಕಾಡುತ್ತಿದೆ ಎಂದು ಹೇಳಿದ್ದಾರೆ.