ಕಾಂಗ್ರೆಸ್ ಕಾರ್ಯಕರ್ತರ ಸಭೆ : ಪಕ್ಷಕ್ಕೆ ನೀಡಿದ ಸೇವೆಯನ್ನಾಧರಿಸಿ ಪಕ್ಷವು ಗೌರವ ನೀಡುತ್ತದೆ: ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್

18/11/2020

ವಿರಾಜಪೇಟೆ:ನ:17: ಕಾರ್ಯಕರ್ತರು ಪದವಿಗಾಗಿ ಆಸೆ ಪಡದೇ ಪಕ್ಷ ಸಂಘಟನೆಯಲ್ಲಿ ಗುರುತಿಸಿಕೊಂಡು ಮುಂದುವರೆದಲ್ಲಿ ಕಾರ್ಯಕರ್ತರ ಸೇವೆಯನ್ನು ಗುರುತಿಸಿ ಪಕ್ಷವು ಗೌರವಾಧರಗಳನ್ನು ನೀಡುತ್ತದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ ಮಂಜುನಾಥ್ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿರಾಜಪೇಟೆ ಬ್ಲಾಕ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಕೊಟ್ಟೋಳಿ ಗ್ರಾಮದಲ್ಲಿ ನಡೆದ ಕೆದಮುಳ್ಳೂರು ವಲಯದ ಅಲ್ಪಸಂಖ್ಯಾತ ಘಟಕದ ನೂತನ ಸಮಿತಿಯ ಅಧೀಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯಅತಿಥಿಗಳಾಗಿ ಮಾತನಾಡಿದರು.
ಮುಂಬರುವ ಗ್ರಾ.ಪಂ, ತಾ.ಪಂ ಮತ್ತು ಜಿ.ಪಂ. ಚುನಾವಣೆಗಳು ನಮ್ಮ ಮುಂದಿದೆ. ಗ್ರಾಮ ಮಟ್ಟ ಬ್ಲಾಕ್ ಮತ್ತು ಜಿಲ್ಲಾ ಮಟ್ಟದಲ್ಲಿ ಚುನಾವಣಾ ಸಮಿತಿಗಳನ್ನು ರಚಿಸಲಾಗಿದ್ದು, ಪಕ್ಷದ ಏಳಿಗೆಗೆ ಗ್ರಾಮದ ಅಭಿವೃದ್ದಿ, ಮನದಲ್ಲಿರಿಸಿಕೊಂಡು ಸೂಕ್ತ ಅಭ್ಯರ್ಥಿಯನ್ನು ಆಯ್ಕೆಗೊಳಿಸುವಂತೆ ಸೂಚಿಸಿದರು.
ಅಂತರಿಕ ಭಿನ್ನಮತಗಳನ್ನು ಬಿಟ್ಟು ಪಕ್ಷದ ಬದ್ದತೆಯನ್ನು ಗಮನದಲ್ಲಿರಿಸಿ ಅಭ್ಯರ್ಥಿ ನಿಯುಕ್ತಿಗೊಳಿಸಿ. ಸಮಸ್ಯೆಗಳಿದ್ದರೆ ಮುಖಂಡರೊಂದಿಗೆ ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುವಂತೆ ಸಲಹೆ ನೀಡಿದರು.
ಕಾಂಗ್ರೆಸ್ ಪಕ್ಷವು ಒಡೆದು ಆಳುವ ಪಕ್ಷವಲ್ಲಾ ಜಾತ್ಯಾತೀತ ನಿಲುವು ಹೊಂದಿರುವ ಪಕ್ಷವಾಗಿದ್ದು, ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷವನ್ನು ಅಲ್ಪಸಂಖ್ಯಾತರ ಪಕ್ಷವೆಂದು ಹೇಳುತ್ತಾರೆ. ಇತಿಹಾಸದ ಪುಟದಲ್ಲಿ ಉಲ್ಲೇಖವಾದಂತೆ ಎಲ್ಲಾ ಧರ್ಮವು ಒಂದು ಎಂಬ ಭಾವನೆಯಿಂದ ಉದಯಾವಾದ ಪಕ್ಷವಾಗಿದೆ. ನಮ್ಮದು ಒಲೈಕೆಯ ಪಕ್ಷವಲ್ಲ… ಒಗ್ಗಟಿನ ಮಂತ್ರದ ಮೂಲಕ ಸಂಘಟಿತವಾದ ಪಕ್ಷವಾಗಿದೆ. ಕಾರ್ಯಕರ್ತರ ಸಂಘಟಿತ ಹೊರಾಟದಿಂದ ಗ್ರಾ.ಪಂ 13 ವಾರ್ಡನಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ವಿರಾಜಪೇಟೆ ತಾ.ಪಂ. ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ, ಈ ಹಿಂದೆ ನಡೆದ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಕೆಲವರು ಟಿಕೇಟ್ ದೊರಕಲಿಲ್ಲಾ ಎಂಬಾ ವೇಧನೆಯಿಂದ ವಿರೋದಿ ಬಣಗಳೋಂದಿಗೆ ಹೊಂದಾಣಿಕೆಯಿಂದ ಪಕ್ಷಕ್ಕೆ ಹಿನ್ನಡೆಯಾಗಿ ವಿರೋಧ ಪಕ್ಷದ ಅಭ್ಯರ್ಥಿಗಳು ಜಯ ಸಾಧಿಸಿದರು. ಇದು ಪುನರಾವರ್ತನೆಗೊಳ್ಳಬಾರದು. ಗ್ರಾಮದ ಹಿರಿಯರ ಪಕ್ಷದ ಮುಖಂಡರ ಮತ್ತು ಕಾರ್ಯಕರ್ತರ ಒಮ್ಮತದ ಅಭ್ಯರ್ಥಿಯನ್ನು ನಿಗಧಿಗೊಳಿಸಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಕಾರ್ಯತಂತ್ರ ರೂಪಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಫೀಕ್ ಕೊಲುಮಂಡ, ಮುಂಬರುವ ಗ್ರಾ.ಪಂ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಕಾರ್ಯಪ್ರವರ್ತರಾಗುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ವಿ.ಎ. ಉಸ್ಮಾನ್, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ರಾಜ್ಯ ಕಿಸನ್ ಘಟಕದ ಕಾರ್ಯದರ್ಶಿ ಗೋಪಾಲ್ ಕೃಷ್ಣ, ಹಿರಿಯರಾದ ಅಬ್ಬಾಸ್ ಆಲಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ವಲಯ ಅಧ್ಯಕ್ಷ ಮಹೇಶ್, ತಾ.ಪಂ. ಮಾಜಿ ಸದಸ್ಯ ಎಂ.ವೈ. ಆಲಿ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ.ಸಲಾಂ, ಗ್ರಾ.ಪಂ. ಸದಸ್ಯ ಹನೀಫಾ, ರಘು ಸುಬ್ಬಯ್ಯ, ಉಪಸ್ಥಿತರಿದ್ದರು.

ಸ್ವಾಗತ ಮತ್ತು ನೀರೂಪಣೆಯನ್ನು ಎಂ.ಎಂ ಇಸ್ಮಾಯಿಲ್ ಮತ್ತು ವಂದನಾರ್ಪಣೆಯನ್ನು ಉಬೈದು ಅವರು ಮಾಡಿದರು.
ಕಾರ್ಯಕರ್ತರ ಸಭೆಯಲ್ಲಿ ಗುಂಡಿಕೇರೆ,ಕೊಟ್ಟೋಳಿ ಮತ್ತು ಕೆದಮುಳ್ಳೂರು ಗ್ರಾಮದ ಪಕ್ಷದ ಕಾರ್ಯಕರ್ತರು ಅಧಿಕ ಸಂಖ್ಯೆಯಲ್ಲಿ ಹಾಜರಿದ್ದರು.