ಫಿಸಿಯೋಥೆರಫಿಸ್ಟರಿಗಾಗಿ ಅರ್ಜಿ ಆಹ್ವಾನ

18/11/2020

ಮಡಿಕೇರಿ ನ.18 : ಮಡಿಕೇರಿ ತಾಲ್ಲೂಕಿನ ಕ್ಷೇತ್ರ ಸಂಪನ್ಮೂಲ ಕೇಂದ್ರದ, ಸಮನ್ವಯ ಶಿಕ್ಷಣ ಕೇಂದ್ರಕ್ಕೆ, ಫಿಸಿಯೋಥೆರಫಿಗಾಗಿ ತಾಲ್ಲೂಕಿನ ವಿವಿಧ ಶಾಲೆಗಳಿಗೆ ವಿಶೇಷ ಅಗತ್ಯತೆಯುಳ್ಳ ಮಕ್ಕಳು ಬರುತ್ತಲಿದ್ದಾರೆ. ಈ ವಿದ್ಯಾರ್ಥಿಗಳಿಗೆ ಫಿಸಿಯೋಥೆರಪಿಗಾಗಿ, ಬಿಪಿಟಿ/ಡಿಪಿಟಿ ವಿದ್ಯಾರ್ಹತೆಯುಳ್ಳ ಒಬ್ಬ ಫಿಸಿಯೋಥೆರಫಿಸ್ಟರು ಮಾಸಿಕ ಗೌರವಧನದ ಆಧಾರದಲ್ಲಿ ತಾತ್ಕಾಲಿಕ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹರು ದಾಖಲಾತಿಗಳೊಂದಿಗೆ ಅರ್ಜಿಯನ್ನು ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳು, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸಮಗ್ರ ಶಿಕ್ಷಣ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ, ಮಡಿಕೇರಿ ತಾಲ್ಲೂಕು, ಕೊಡಗು ಮೊ.ಸಂ.9535603013 ಗೆ ಸಲ್ಲಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಅಭಿಯಾನ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಅವರು ತಿಳಿಸಿದ್ದಾರೆ.