7ನೇ ಹೊಸಕೋಟೆಯಲ್ಲಿ ಪೌತಿ ಖಾತೆ ಬದಲಾವಣೆ ಆಂದೋಲನ

November 18, 2020

ಮಡಿಕೇರಿ ನ. 18 : ಸುಂಟಿಕೊಪ್ಪ ಹೋಬಳಿ 7ನೇ ಹೊಸಕೋಟೆ, ಕಂಬಿಬಾಣೆ, ಅತ್ತೂರು ನಲ್ಲೂರು ಗ್ರಾಮದ ಪೌತಿ ವಾರಸುಖಾತೆ ಬದಲಾವಣೆ ಆಂದೋಲನವು 7ನೇ ಹೊಸಕೋಟೆ ಸರಕಾರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಈ ಆಂದೋಲನದಲ್ಲಿ 45 ಮಂದಿ ಕೃಷಿ ಫಲಾನುಭವಿಗಳು ಭಾಗವಹಿಸಿದ್ದು, 17 ಅರ್ಜಿಗಳನ್ನು ಸ್ವೀಕರಿಸಲಾಯಿತು. ಉಳಿದ ಮಂದಿ ಮಾಹಿತಿ ಬೇಕಾದ ದಾಖಲಾತಿಗಳನ್ನು ಕಚೇರಿಗೆ ಹಾಜರುಪಡಿಸುವುದೆಂದು ತಿಳಿಸಿದರು.
ಉಪತಹಶಿಲ್ಧಾರ್ ಶುಭಾ ಅವರು ಮಾತನಾಡಿ, ಸರಕಾರದ ಆದೇಶದಂತೆ ಸುಲಲಿತವಾಘಿ ಆಸ್ತಿ ಖಾತೆದಾರರ ಕುಟುಂಬಸ್ಥ ಸದಸ್ಯರುಗಳಿಗೆ ಜಾಗದ ಪರಭಾರೆ ಮಾಡಲಾಗುವುದು. ಪೌತಿದಾರರ ಮರಣ ದೃಢೀಕರಣ ಪತ್ರ, ಆಧಾರಕಾರ್ಡು, ಪಡಿತರಚೀಟಿ,ಮತದಾರರ ಗುರುತಿನ ಚೀಟಿಯನ್ನು ಕುಟುಂಬ ಸದಸ್ಯರು ಸಲ್ಲಿಸಬೇಕು ಎಂದೂ ಹೇಳಿದರು.
ಕಂದಾಯ ಪರೀವಿಕ್ಷಕರಾದ ಶಿವಪ್ಪ ಅವರು ಮಾತನಾಡಿ ಸರಕಾರದ ಸೌಲಭ್ಯಗಳನ್ನು ಗ್ರಾಮೀಣ ಮಟ್ಟದಲ್ಲೂ ತಲುಪಿಸಬೇಕು ಅಸ್ತಿಯ ಹಕ್ಕುದಾರರು ಆದರಿಂದ ವಂಚಿತರಾಗಬಾರದೆಂದು ಪೌತಿಖಾತೆ ಬದಲಾವಣೆ ಆಂದೋಲನ ನಡೆಸಲಾಗುತ್ತಿದೆ.
ಜಮ್ಮಾ ಬಾಣೆಯ ಸರ್ವೆ ನಂಬರ್‍ನಲ್ಲಿ 50 ಮಂದಿ ಕುಟುಂಬ ಸದಸ್ಯರುಗಳು ಇರುತ್ತಿದ್ದರು ಈಗ ಪ್ರತಿಯೊಬ್ಬ ಸದಸ್ಯರುಗಳಿಗೆ ಪೌತಿಖಾತೆ ಬದಲಾವಣೆಯಿಂದ ಪ್ರಯೋಜನ ಪಡೆಯಲು ಸರಕಾರ ನಿಯಮನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ. ಸರಕಾರ ಆದೇಶ ಪ್ರಕಾರ ಮಾತ್ರ ಕೆಲಸ ನಿರ್ವಹಿಸುವುದು.
ನಾವು ಬಾಧ್ಯರಾಗುತ್ತೇವೆ ಎಂದೂ ಅತ್ತೂರು ನಲ್ಲೂರು ಕಾಫಿಬೆಳೆಗಾರರಾದ ಮೋಹನ್ ಮೊಣ್ಣಪ್ಪ ಅವರ ಪ್ರಶ್ನೆಗೆ ಉತ್ತರ ನೀಡಿದರು.
ಪೌತಿಖಾತೆ ಬದಲಾವಣೆ ಆಂದೋಲನ ಕಾರ್ಯಕ್ರಮದಲ್ಲಿ ಗ್ರಾಮಲೆಕ್ಕಿಗರಾದ ಹೊಸಕೋಟೆ ಗ್ರಾಮಲೆಕ್ಕಿಗೆ ನಸ್ಸೀಮ, ದೀಪಿಕಾ, ಡಾಪ್ನ ಡಿ.ಕ್ರುಸ್, ಆಶಾ ಬ್ಯಾಡಗೌಡರ್, ನಾಗೇಂದ್ರ,ಗ್ರಾಮಸಹಾಯಕರಾದ ಶಿವಪ್ಪ ಉಪಸ್ಥಿತರಿದ್ದರು.

error: Content is protected !!