ನ. 19 ರಂದು ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ” ವಿಚಾರ ವಿನಿಮಯ

November 18, 2020

ಮಡಿಕೇರಿ ನ. 18 : ಪ್ರವಾದಿ ಮುಹಮ್ಮದ್ (ಸ) ಮಾನವತೆಯ ಮಾರ್ಗದರ್ಶಕ” ವಿಷಯದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕದ ವತಿಯಿಂದ ರಾಜ್ಯಾದ್ಯಂತ ನಡೆಯುತ್ತಿರುವ ಸೀರತ್ ಅಭಿಯಾನದ ಅಂಗವಾಗಿ ನ. 19 ರಂದು ಮಡಿಕೇರಿಯಲ್ಲಿ ವಿಚಾರ ವಿನಿಮಯ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 11 ಗಂಟೆಗೆ ನಗರದ ಕಾರುಣ್ಯ ಸದನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕರ್ನಾಟಕ ಜ.ಇ. ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞÂ ವಿಷಯ ಮಂಡನೆ ಮಾಡಲಿದ್ದು, ಅಧ್ಯಕ್ಷತೆಯನ್ನು ಜ.ಇ. ಹಿಂದ್ ಮಂಗಳೂರು ವಲಯದ ಸಂಚಾಲಕ ಯು. ಅಬ್ದುಸ್ಸಲಾಮ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ರಾಜ್ಯ ಪ್ರಾಥಮಿಕ ಶಾಲಾ ಸಮಿತಿಯ ಅಧ್ಯಕ್ಷ ಹೆಚ್.ಎಸ್. ಚೇತನ್, ಮಡಿಕೇರಿಯ ವಕೀಲರ ಸಂಘದ ಅಧ್ಯಕ್ಷ ಕಾರೆರ ಕವನ್, ಪತ್ರಕರ್ತೆ ಉಷಾ ಪ್ರೀತಮ್ ಭಾಗವಹಿಸಲಿದ್ದು, ಜ.ಇ.ಹಿಂದ್ ಮಡಿಕೇರಿ ಸ್ಥಾನೀಯ ಅಧ್ಯಕ್ಷ ಜಿ.ಹೆಚ್. ಮುಹಮ್ಮದ್ ಹನೀಫ್, ಸೀರತ್ ಅಭಿಯಾನ ಸಂಚಾಲಕ ಎಂ.ಅಬ್ದುಲ್ಲ, ಸಾರ್ವಜನಿಕ ಸಂಪರ್ಕ ಸಂಚಾಲಕ ಸಿ.ಹೆಚ್. ಅಫ್ಸರ್ ಪಾಲ್ಗೊಳ್ಳಲಿದ್ದಾರೆ.

error: Content is protected !!