ರುಚಿಕರವಾದ ಬಾಳೆಕಾಯಿ ಗ್ರೇವಿ ಮಾಡುವ ವಿಧಾನ

November 18, 2020

ಬೇಕಾಗುವ ಸಾಮಾಗ್ರಿಗಳು : 3-4 ಚಮಚ ಎಣ್ಣೆ, 5 ಸಾರು ಬಾಳೆ ಕಾಯಿ 4 ( ಸಿಪ್ಪೆ ತೆಗೆದು ಕತ್ತರಿಸಿರಬೇಕು), ಸ್ವಲ್ಪ ಕರಿಬೇವಿನ ಎಲೆ, ಅರ್ಧ ಚಮಚದಷ್ಟು ಸಾಸಿವೆ, 1 ಚಮಚ ಕೆಂಪು ಮೆಣಸಿನ ಪುಡಿ, 2 ಚಮಚ ಹುಣಸೆ ಹಣ್ಣಿನ ರಸ, 1/2 ಚಮಚ ಅರಿಶಿಣ ಪುಡಿ, 5-6 ಬೆಳ್ಳುಳ್ಳಿ ಎಸಳು, ಅರ್ಧ ಇಂಚಿನಷ್ಟು ದೊಡ್ಡದಿರುವ ಶುಂಠಿ, 1 ಚಮಚದಷ್ಟು ಅಕ್ಕಿ,ರುಚಿಗೆ ತಕ್ಕ ಉಪ್ಪು,

ತಯಾರಿಸುವ ವಿಧಾನ: ಶುಂಠಿ, ಅಕ್ಕಿ, ಬೆಳ್ಳುಳ್ಳಿ ಇವುಗಳನ್ನು ಅರೆದು ಪೇಸ್ಟ್ ಮಾಡಿಡಬೇಕು. ಈಗ ಬಾಳೆಕಾಯಿಗೆ ಸ್ವಲ್ಪ ಉಪ್ಪು ಹಾಕಿ ಬೇಯಿಸಿ ನೀರು ಬಸಿದು ಒಂದು ಪಾತ್ರೆಯಲ್ಲಿಡಬೇಕು. ಈಗ ಪಾತ್ರೆಯನ್ನು ಉರಿಯ ಮೇಲಿಟ್ಟು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಮಾಡುವಾಗ ಕರಿಬೇವಿನ ಎಲೆ ಹಾಕಿ ನಂತರ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಅರಿಶಿ ಪುಡಿ ಹಾಗೂ ಖಾರದ ಪುಡಿ ಹಾಕಿ 2 ನಿಮಿಷ ಹುರಿದು, ಹುಣಸೆ ಹಣ್ಣಿನ ರಸ ಹಾಕಿ ಸೌಟ್ ನಿಂದ ಒಮ್ಮೆ ತಿರುಗಿಸಿ ನಂತರ ಎರಡು ಕಪ್ ನೀರು ಹಾಕಬೇಕು, ಜೊತೆಗೆ ರುಚಿ ತಕ್ಕ ಉಪ್ಪ ಹಾಕಿ ಈ ಮಿಶ್ರಣವನ್ನು ಕುದಿಸಿ. ನಂತರ ಬೇಯಿಸಿದ ಬಾಳೆಕಾಯಿಯನ್ನು ಹಾಕಿ ಗ್ರೇವಿಯ ಮಿಶ್ರಣವಾಗುವವರೆಗೆ ಬೇಯಿಸಿ ಉರಿಯಿಂದ ಇಳಿಸಿದರೆ ರುಚಿಕರವಾದ ಬಾಳೆಕಾಯಿ ಗ್ರೇವಿ ರೆಡಿ.

error: Content is protected !!