ರಾಮನ ವಿಗ್ರಹದ ಮೇಲೆ ಸೂರ್ಯ ಕಿರಣ

November 19, 2020

ಮಂಗಳುರು ನ.19 : ಅಯೋಧ್ಯೆಯಲ್ಲಿ ನಿರ್ಮಿಸಲಿರುವ ರಾಮಮಂದಿರದ ರಾಮನ ವಿಗ್ರಹದ ಮೇಲೆ ಶ್ರೀರಾಮ ನವಮಿಯ ದಿನ ಸೂರ್ಯನ ಕಿರಣಗಳು ಬೀಳುವಂತಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ
ಶ್ರೀರಾಮ ನವಮಿಯಂದು ಭಗವಾನ್ ರಾಮನ ವಿಗ್ರಹದ ಮೇಲೆ ಸೂರ್ಯನ ಕಿರಣಗಳು ಬೀಳುವ ರೀತಿಯಲ್ಲಿ ರಾಮ ಮಂದಿರ ವಿನ್ಯಾಸಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ ಎಂದು 15 ಸದಸ್ಯರ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರಾದ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿಎಸ್‍ಐಆರ್) ಇದರ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಹೊತ್ತಿದೆ. ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸುವಾಗ ಭಕ್ತರಿಗೆ 3ಡಿ ಅನುಭವ ನೀಡುವ ಕೆಲಸ ಮಾಡುವಂತೆ ಮೋದಿ ಸಲಹೆ ನೀಡಿದರು. 3ಡಿ ಕೆಲಸವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಗೆ ವಹಿಸಲಾಗಿದೆ ಎಂದು ಶ್ರೀಗಳು ಹೇಳಿದ್ದಾರೆ.
ರಾಮ ಮಂದಿರವನ್ನು ನಿರ್ಮಿಸಲಿರುವ ಜಮೀನಿನ ಸಾಮಥ್ರ್ಯ ಪರೀಕ್ಷೆಯನ್ನು 200 ಅಡಿ ಆಳದವರೆಗೆ ಅಗೆಯುವ ಮೂಲಕ ನಡೆಸಲಾಗುತ್ತಿದೆ ಎಂದು ಹೇಳಿದ ಶ್ರೀಗಳು ಇತ್ತೀಚೆಗೆ ಅಯೋಧ್ಯೆಗೆ ಭೇಟಿ ನೀಡಿದ್ದು ಭೂಮಿಯನ್ನು ಹಸನುಗೊಳಿಸುವ ಕೆಲಸವನ್ನು ಗಮನಿಸಿದ್ದಾರೆ.

error: Content is protected !!